ವಿವೋ ಫೋನ್‌ಗಳ ರಫ್ತು ತಡೆ ಹಿಡಿದ ಭಾರತ

ಗುರುವಾರ, 8 ಡಿಸೆಂಬರ್ 2022 (07:07 IST)
ನವದೆಹಲಿ : ವಿದೇಶಕ್ಕೆ ರಫ್ತು ಆಗಬೇಕಿದ್ದ ಚೀನಾದ ವಿವೋ ಕಂಪನಿಯ 27 ಸಾವಿರ ಫೋನ್ಗಳನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ವಿಭಾಗ ತಡೆ ಹಿಡಿದಿದೆ.

ಡಿವೈಸ್ ಮಾದರಿಗಳು ಮತ್ತು ಅವುಗಳ ಮೌಲ್ಯವನ್ನು ತಪ್ಪಾಗಿ ಘೋಷಿಸಿದ ಆರೋಪದ ಹಿನ್ನೆಲೆಯಲ್ಲಿ ಡಿ.2 ರಿಂದ ಸುಮಾರು ಒಟ್ಟು 15 ದಶಲಕ್ಷ ಡಾಲರ್(123.73 ಕೋಟಿ ರೂ.)ಮೌಲ್ಯದ ಸರಕನ್ನು ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ.

ತಡೆ ಹಿಡಿದ ಪ್ರಕರಣದ ಬಗ್ಗೆ ಹಣಕಾಸು ಸಚಿವಾಲಯ ಮತ್ತು ವಿವೋ ಕಂಪನಿ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.  ವಿವೋ ಕಮ್ಯುನಿಕೇಷನ್ಸ್ ಟೆಕ್ನಾಲಜಿ ಕಂಪನಿ ಭಾರತ ಘಟಕದಿಂದ ಈ ಫೋನ್ಗಳನ್ನು ತಯಾರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ