ಗೋಧಿ ಹಿಟ್ಟು, ಮೈದಾ, ರವೆ ರಫ್ತು ನಿಷೇಧ!

ಭಾನುವಾರ, 28 ಆಗಸ್ಟ್ 2022 (14:58 IST)
ನವದೆಹಲಿ : ಬೆಲೆ ಏರಿಕೆಯ ಹಿನ್ನೆಲೆ ಕೇಂದ್ರ ಸರ್ಕಾರ ಮೈದಾ, ರವೆ, ಗೋಧಿ ಹಿಟ್ಟಿನ ರಫ್ತನ್ನು ನಿಷೇಧಿಸಿದೆ. ಈ ಹಿಂದೆ ಮೇ ತಿಂಗಳಿನಲ್ಲೂ ಸರ್ಕಾರ ಗೋಧಿ ರಫ್ತಿನ ಮೇಲೆ ನಿಷೇಧ ಹೇರಿತ್ತು.

ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಸರ್ಕಾರ ರಫ್ತು ನಿಷೇಧ ಹೇರಿಕೆ ಮಾಡಿದೆ. ಆದರೂ ಕೆಲವು ಸಂದರ್ಭಗಳಲ್ಲಿ ಸರ್ಕಾರದ ಅನುಮತಿಯ ಮೇರೆಗೆ ಈ ವಸ್ತುಗಳನ್ನು ರಫ್ತು ಮಾಡಲು ಸಾಧ್ಯವಾಗುತ್ತದೆ ಎಂದು ವಿದೇಶೀ ವ್ಯಾಪಾರದ ಮಹಾನಿರ್ದೇಶನಾಲಯ ತಿಳಿಸಿದೆ.

ಆಗಸ್ಟ್ 25 ರಂದು, ಸರಕುಗಳ ಏರುತ್ತಿರುವ ಬೆಲೆಗಳನ್ನು ತಡೆಯಲು ಗೋಧಿ ಅಥವಾ ಮೆಸ್ಲಿನ್ ಹಿಟ್ಟಿನ ರಫ್ತಿನ ಮೇಲೆ ನಿರ್ಬಂಧಗಳನ್ನು ಹೇರಲು ಸರ್ಕಾರ ನಿರ್ಧರಿಸಿತು. ಬಳಿಕ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ತಿದ್ದುಪಡಿಯ ಪ್ರಸ್ತಾಪವನ್ನು ಅನುಮೋದಿಸಿದೆ.

ರಷ್ಯಾ ಮತ್ತು ಉಕ್ರೇನ್ ಗೋಧಿಯ ಪ್ರಮುಖ ರಫ್ತುದಾರರಾಗಿದ್ದು, ಜಾಗತಿಕ ಗೋಧಿ ವ್ಯಾಪಾರದ ಸುಮಾರು ನಾಲ್ಕನೇ ಒಂದು ಭಾಗವನ್ನು ಹೊಂದಿದೆ. ಆದರೆ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದ ಇದೀಗ ಜಾಗತಿಕ ಗೋಧಿ ಪೂರೈಕೆಗೆ ಅಡೆತಡೆಯುಂಟಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ