ಭಾರತ - ಚೀನಾ ಜಂಟಿ ಸಮರಾಭ್ಯಾಸ

ಶುಕ್ರವಾರ, 21 ಅಕ್ಟೋಬರ್ 2016 (12:13 IST)
ಭಾರತ ಮತ್ತು ಚೀನಾದ ಯೋಧರು ಜಮ್ಮು ಕಾಶ್ಮೀರದಲ್ಲಿ ಜಂಟಿ ಸಮರಾಭ್ಯಾಸ ನಡೆಸುತ್ತಿದ್ದಾರೆ.

 
ಲಡಾಕ್‌ ಬಳಿ ಗಡಿ ನಿಯಂತ್ರಣ ರೇಖೆಯ ಬಳಿಯ ಗ್ರಾಮವೊಂದರಲ್ಲಿ ಚೀನಾದ ರೆಡ್ ಆರ್ಮಿ ಭಾರತೀಯ ಸೈನಿಕರೊಂದಿಗೆ ಅಭ್ಯಾಸ ನಡೆಸುತ್ತಿದೆ. 
 
ಭೂಕಂಪ ಮತ್ತು ಇನ್ನಿತರ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ನಡೆಸಬೇಕಾದ ಕಾರ್ಯಾಚರಣೆಗಳ ಬಗ್ಗೆ ಉಭಯ ದೇಶದ ಯೋಧರು ತರಬೇತಿ ಪಡೆಯುತ್ತಿದ್ದಾರೆ. 
 
ಗಡಿಯಲ್ಲಿ ಪಾಕೃತಿಕ ವಿಕೋಪ ಸಂಭವಿಸಿದಾಗ ಪರಷ್ಪರ ಸಹಕಾರ ಅನಿವಾರ್ಯ. ಈ ಸಂದರ್ಭಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸುವ ಉದ್ದೇಶದಿಂದ ಈ ಅಭ್ಯಸವನ್ನು ಕೈಗೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
 
ಕಳೆದ ಫೆಬ್ರವರಿ ತಿಂಗಳಲ್ಲಿ ಉಭಯ ದೇಶಗಳ ಸೈನಿಕರು ಮೊದಲ ಹಂತದ ತರಬೇತಿ ಪಡೆದಿದ್ದರು. ಅದರ ಮುಂದುವರೆದ ಭಾಗವಾಗಿ ಈ ಅಭ್ಯಾಸವನ್ನು ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ