ಭಾರತದ ಪ್ರಥಮ ಮಂಗಳಮುಖಿ ಪ್ರಾಚಾರ್ಯರಿವರು!

ಬುಧವಾರ, 27 ಮೇ 2015 (12:09 IST)
ಮಂಗಳಮುಖಿಯೊಬ್ಬರು ಕಾಲೇಜಿನ ಪ್ರಾಂಶುಪಾಲರಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ತೃತೀಯ ಲಿಂಗಿಯೊಬ್ಬರು ಭಾರತದಲ್ಲಿ ಪ್ರಥಮ ಬಾರಿಗೆ ಕಾಲೇಜು ಪ್ರಾಚಾರ್ಯರಾದ ಗರಿಮೆಗೆ ಇವರು ಪಾತ್ರರಾಗಿದ್ದಾರೆ. 

ಪಶ್ಚಿಮ ಬಂಗಾಳದ ಕೃಷ್ಣನಗರ ಮಹಿಳಾ ಕಾಲೇಜಿನಲ್ಲಿ ಬರುವ ಜೂನ್ 9 ರಂದು ಮಾನಬಿ ವಂಧೋಪಧ್ಯಾಯ ಎನ್ನುವ ತೃತೀಯ ಲಿಂಗಿಯೊಬ್ಬರು ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
 
ಸದ್ಯ ಅವರು ವಿವೇಕಾನಂದ ಸತೋವಾರ್ಷಿಕಿ ಮಹಾವಿದ್ಯಾಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಹುಶ: ವಿಶ್ವದಲ್ಲಿ ತೃತೀಯ ಲಿಂಗಿಯೊಬ್ಬರಿಗೆ ಕಾಲೇಜು ಪ್ರಾಂಶುಪಾಲರ ಜವಾಬ್ದಾರಿ ನೀಡುತ್ತಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. 
 
ತೃತೀಯ ಲಿಂಗಿಯೊಬ್ಬರು ಕಾಲೇಜಿನ ಜವಾಬ್ದಾರಿ ಹೊತ್ತುಕೊಳ್ಳುವುದಕ್ಕೆ ರಾಜ್ಯದ ಶಿಕ್ಷಣ ಮಂತ್ರಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ 
 
ಕಾಲೇಜಿನಲ್ಲಿ ಭೂಗೋಳ ಉಪನ್ಯಾಸಕಿಯಾಗಿರುವ ಜಯಂತಿ ಮಂಡಲ್ ಹೇಳುವಂತೆ "ಮಾನಬಿ ಅವರು ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ಅದನ್ನೆಲ್ಲ ಎದುರಿಸಿ ಅವರು ಉನ್ನತ ಮಟ್ಟಕ್ಕೆ ತಲುಪಿದ್ದಾರೆ ಮತ್ತು ಯುವ ಜನಾಂಗಕ್ಕೆ ಆದರ್ಶ ಪ್ರಾಯರಾಗಿದ್ದಾರೆ". 

ವೆಬ್ದುನಿಯಾವನ್ನು ಓದಿ