ದೇಶದಲ್ಲಿ ಏರಿಕೆಯತ್ತ ಕೊರೊನಾ: 43,982 ಪಾಸಿಟಿವ್, 533 ಸಾವು
ಗುರುವಾರ, 5 ಆಗಸ್ಟ್ 2021 (14:11 IST)
ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 3,18,12,114ಕ್ಕೆ ಏರಿಕೆಯಾದರೆ, ಒಟ್ಟಾರೆ ಸಾವಿನ ಸಂಖ್ಯೆ 4,26,290ಕ್ಕೆ ಜಿಗಿತ ಕಂಡಿದೆ.
ಒಂದು ದಿನದಲ್ಲಿ 41,126 ಮಂದಿ ಗುಣಮುಖಿತರಾಗಿದ್ದು, ಒಟ್ಟಾರೆ ಗುಣಮುಖಿತರ ಸಂಖ್ಯೆ 3,09,74,748ಕ್ಕೆ ಜಿಗಿತ ಕಂಡಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 4,11,076ಕ್ಕೆ ಏರಿಕೆಯಾಗಿದೆ.
ಕೇರಳದಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, 22,414 ಪಾಸಿಟಿವ್ ದೃಢಪಟ್ಟಿದೆ. ಮಹಾರಾಷ್ಟ್ರದಲ್ಲಿ 61,26 ಪ್ರಕರಣಗಳು ದೃಢಪಟ್ಟಿವೆ.