ಹಾಕಿ ಪಂದ್ಯ ನೋಡಲು ಯೋಗ ಬಿಟ್ಟ ಮೋದಿ!

ಗುರುವಾರ, 5 ಆಗಸ್ಟ್ 2021 (10:54 IST)
ನವದೆಹಲಿ: ಇಂದು ಬೆಳ್ಳಂ ಬೆಳಿಗ್ಗೆಯೇ ಭಾರತ ಪುರುಷರ ಹಾಕಿ ತಂಡ ಒಲಿಂಪಿಕ್ಸ್ ಪದಕ ಗೆಲ್ಲುವ ಪಂದ್ಯ ನೋಡಲು ಇಡೀ ದೇಶವೇ ಕಾತುರದಿಂದ ಕಾಯುತ್ತಿತ್ತು. ಪ್ರಧಾನಿ ಮೋದಿಯೂ ಇದಕ್ಕೆ ಹೊರತಾಗಿರಲಿಲ್ಲ!


ಮೋದಿ ಪ್ರತಿನಿತ್ಯ ಬೆಳಿಗ್ಗೆ ಯೋಗ ಮಾಡುತ್ತಾರೆ. ಇದನ್ನು ಅವರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲ್ಲ. ಆದರೆ ಸ್ವತಃ ಕ್ರೀಡಾಪ್ರೇಮಿಯಾಗಿರುವ ಪ್ರಧಾನಿ ಇಂದು ಭಾರತ ತಂಡ ಆಡುವ ಪಂದ್ಯ ನೋಡಲೆಂದು ಯೋಗವನ್ನೂ ತಪ್ಪಿಸಿಕೊಂಡಿದ್ದರಂತೆ!

ಬೆಳಿಗ್ಗೆ ಹಾಕಿ ಪಂದ್ಯವನ್ನು ನೋಡಲು ಸಮಯ ಹೊಂದಿಸಲು ಯೋಗ ತಪ್ಪಿಸಿ ಟಿವಿ ಮುಂದೆ ಕೂತಿದ್ದರಂತೆ! ಕೊನೆಗೆ ಪಂದ್ಯ ಗೆದ್ದಾಗ ಸಂಭ್ರಮದಿಂದ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ