17ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಣೆ

ಮಂಗಳವಾರ, 26 ಜುಲೈ 2016 (12:13 IST)
ಪಾಕಿಸ್ತಾನದ ವಿರುದ್ಧ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ವಿಜಯೋತ್ಸವವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಪ್ರಧಾನಿ ಮೋದಿ ಟ್ವಿಟ್ಟರ್‌‌ನಲ್ಲಿ ಸೈನಿಕರ ತ್ಯಾಗ ಬಲಿದಾನವನ್ನು ಕೊಂಡಾಡಿದ್ದಾರೆ.
 
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಭೂಸೇನೆ ನೌಕಾಸೇನೆ ಮತ್ತು ವಾಯುಸೇನೆಯ ಮುಖ್ಯಸ್ಥರು  ಅಮರ ಜವಾನ್ ಜ್ಯೋತಿ ಮೆಮೋರಿಯಲ್‌ಗೆ ಭೇಟಿ ನೀಡಿ ಶೃದ್ಧಾಂಜಲಿ ಅರ್ಪಿಸಿದರು.  
 
ಕೇಂದ ಗೃಹ ಖಾತೆ ಸಚಿವ ರಾಜನಾಥ್ ಸಿಂಗ್ ಕೂಡಾ ಕಾರ್ಗಿಲ್ ಯುದ್ಧದ ಗೆಲುವಿಗೆ ಕಾರಣಿಭೂತರಾದ ಸೈನಿಕರ ಶೌರ್ಯ ಸಾಹಸವನ್ನು ಹೊಗಳಿದರು.
 
ಏತನ್ಮಧ್ಯೆ, ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್, ದ್ರಾಸ್ ಪ್ರದೇಶದಲ್ಲಿ ಆಪರೇಶನ್ ವಿಜಯ್‌ನಲ್ಲಿ ಹುತಾತ್ಮರಾದ ಸೈನಿಕರಿಗೆ ಶೃದ್ಧಾಂಜಲಿ ಅರ್ಪಿಸಿದರು.  
 
ಲೆಫ್ಟೆನೆಂಟ್ ಜನರಲ್ ಡಿ.ಎಸ್.ಹೂಡಾ ಮತ್ತು ನಾರ್ಥರ್ನ್ ಕಮಾಂಡ್‌ನ ಆರ್ಮಿ ಕಮಾಂಡರ್ ಸಿಂಗ್ ಕೂಡಾ ಹುತಾತ್ಮರಾದ ಕುಟುಂಬದವರೊಂದಿಗೆ ಸಂವಾದ ನಡೆಸಿ, ಪ್ರಶಸ್ತಿಗಳನ್ನು ವಿತರಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ