ವಿಶ್ವಬ್ಯಾಂಕ್`ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಬಹುದೊಡ್ಡ ಜಯ

ಬುಧವಾರ, 2 ಆಗಸ್ಟ್ 2017 (20:17 IST)
ಜೇಲಬ್ ಮತ್ತು ಚೆನಬ್ ನದಿಗಳಲ್ಲಿ ಜಲವಿದ್ಯುತ್ ಸ್ಥಾವರ ನಿರ್ಮಾಣ ವಿಚಾರದಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಬಹುದೊಡ್ಡ ಜಯ ಸಿಕ್ಕಿದೆ. 1960ರ ಸಿಂಧೂ ನದಿ ಜಲ ಒಪ್ಪಂದದ ಅನ್ವಯ ಭಾರತಕ್ಕೆ ಜೇಲಮ್ ಮತ್ತು ಚೆನಬ್ ನದಿಗಳಲ್ಲಿ ಯೋಜನೆ ಮುಂದುವರೆಸಲು ಅನುಮತಿ ನೀಡಿರುವುದಾಗಿ ಭಾರತ ಮತ್ತು ಪಾಕಿಸ್ತಾನದ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಬಳಿ ವಿಶ್ವಬ್ಯಾಂಕ್ ಘೋಷಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ನಿರ್ಮಿಸುತ್ತಿದ್ದ 330 ಮೆಗಾವ್ಯಾಟ್ ಕಿಶನ್ ಗಂಗಾ ಮತ್ತು 850 ಮೆಗಾವ್ಯಾಟ್ ರಟ್ಲೆ ಜಲ ವಿದ್ಯುತ್ ಸ್ಥಾವರಗಳ ಯೋಜನೆಗೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿತ್ತು. ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿದ ವಿಶ್ವಬ್ಯಾಂಕ್, ಯೋಜನೆ ಮುಂದುವರೆಸಲು ಅನುಮತಿ ನೀಡಿದೆ. ಸಿಂಧು ಜಲ ಒಪ್ಪಂದದ ಪ್ರಕಾರ ಭಾರತಕ್ಕೆ ಯೋಜನೆ ಕೈಗೊಳ್ಳುವ ಹಕ್ಕಿದೆ ಎಂದು ಹೇಳಿದೆ.

ಕಳೆದ ಜುಲೈನಲ್ಲೇ ವಿಶ್ವಬಾಂಕ್ ಈ ವಿವಾದವನ್ನ ಸೌಹಾರ್ದಯುತವಾಗಿ ಬಗೆಹರಿಸುವುದಾಗಿ ಭಾರತದ ಻ಂಬಾಸಿಡರ್`ಗೆ ಭರವಸೆ ನೀಡಿತ್ತು, ಅದರಂತೆ ಈಗ ಮಾತುಕತೆ ಮೂಲಕ ಪರಿಹಾರ ನೀಡಿದೆ. 1960ರ ೊಪ್ಪಂದದ ಪ್ರಕಾರ, ಪೂರ್ವದಲ್ಲಿ ಹರಿಯುವ ಬಿಯಾಸ್, ರವಿ, ಸಟ್ಲೇಜ್ ನದಿ ನೀರಿನ ಬಳಕೆಯನ್ನ ಭಾಕೆಯನ್ನ ನೀಡಲಾಗಿತ್ತು. ಪಶ್ಚಿಮದ ಸಿಂಧೂ, ಚೇನಬ್ ಮತ್ತು ಜೇಲಮ್ ನದಿಗಳ ಹಕ್ಕನ್ನ ಪಾಕಿಸ್ತಾನಕ್ಕೆ ನೀಡಲಾಗಿತ್ತಾದರೂ ಈ ನದಿಗಳನ್ನ ಕೃಷಿ, ವಿದ್ಯುತ್, ಸಾರಿಗೆ ಬಳಕೆಗೆ ಭಾರತಕ್ಕೆ ಅವಕಾಶ ನೀಡಲಾಗಿತ್ತು. ಅದರನ್ವಯ, ಭಾರತದಿಂದಲೇ ಹರಿಯುವ ಈ ನದಿಗಳಲ್ಲಿ ವಿದ್ಯುತ್ ಯೋಜನೆಯನ್ನ ಭಾರತ ಆ್ರಂಭಿಸಿತ್ತು. ಇದನ್ನ ವಿರೋಧಿಸಿದ್ದ ಪಾಕಿಸ್ತಾನ ೀ  ಯೋಜನೆಯಿಂದ ಬರಗಾಲದ  ಸಂದರ್ಭಗಳಲ್ಲಿ ಜಲಕ್ಷಾಮದ ಆತಂಕ ವ್ಯಕ್ತಪಡಿಸಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ