ಪ್ಯಾರಿಸ್: ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಐತಿಹಾಸಿಕ ಸಾಧನೆ ಮೆರೆದಿದ್ದಾರೆ. ಪದಕ ಗಳಿಕೆಯಲ್ಲಿ ಭಾರತ ಸಾರ್ವಕಾಲಿಕ ದಾಖಲೆ ಮಾಡಿದೆ.
ಮೂರು ವರ್ಷಗಳ ಹಿಂದೆ ಟೊಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ದಾಖಲೆಯ 19ಪದಕಗಳನ್ನು ಗೆದ್ದಿದ್ದರು. ಅದು ಇಲ್ಲಿವರೆಗಿನ ಭಾರತದ ಶ್ರೇಷ್ಠ ದಾಖಲೆಯಾಗಿತ್ತು. ಆದರೆ ಈ ಬಾರಿ ಪ್ಯಾರಿಸ್‌ನಲ್ಲಿ ಭಾರತ 24ಪದಕಗಳನ್ನು ಗಳಿಸಿದ್ದು, ಹೊಸ ದಾಖಲೆ ನಿರ್ಮಿಸಿದೆ.
ಆಗಸ್ಟ್ 28ರಂದು ಆರಂಭವಾದ ಪ್ಯಾರಾಂಪಿಕ್ಸ್‌ನಲ್ಲಿ ಭಾರತದ ಒಟ್ಟು 84ಪ್ಯಾರಾ ಅಥ್ಲೆಟಿಕ್‌ಗಳು ಭಾಗವಹಿಸಿದ್ದರು. ಭಾರತ 5ಚಿನ್ನ, 9ಬೆಳ್ಳಿ ಮತ್ತು 10 ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದೆ. ಇನ್ನೂ ಮೂರು ದಿನ ಸ್ಪರ್ಧೆ ನಡೆಯಲಿರುವುದರಿಂದ ಮತ್ತಷ್ಟು ಪದಕಗಳು ಭಾರತದ ಮಡಿಲಿಗೆ ಸೇರುವ ನಿರೀಕ್ಷೆಯಿದೆ.
ದೈಹಿಕ ಹಾಗೂ ಮಾನಸಿಕ ದೌರ್ಭಲ್ಯ ಹೊಂದಿರುವ ಅಥ್ಲಿಟ್‌ಗಳ ಈ ಸಾಧನೆಗೆ ದೇಶದಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.