ಪ್ಯಾರಿಸ್‌ನಲ್ಲಿ ಹೆಚ್ಚಿದ ಉಷ್ಣತೆ: ಕ್ರೀಡಾಪಟುಗಳಿಗೆ ಭಾರತದಿಂದಲೇ ರವಾನೆಯಾಯಿತು ಪೋರ್ಟಬಲ್ ಎಸಿ

Sampriya

ಶನಿವಾರ, 3 ಆಗಸ್ಟ್ 2024 (16:25 IST)
Photo Courtesy X
ಬೆಂಗಳೂರು: ಒಲಿಂಪಿಕ್ಸ್ ನಡೆಯುತ್ತಿರುವ ಪ್ಯಾರಿಸ್‌ನಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಆ ತಾಪಮಾನಕ್ಕೆ ಹೊಂದಿಕೊಳ್ಳಲು ಭಾರತದ ಕ್ರೀಡಾಪಟುಗಳು ಪ್ರಯಾಸ ಪಡುತ್ತಿದ್ದಾರೆ.

ಇದನ್ನರಿತ ಭಾರತ ಸರ್ಕಾರ ಭಾರತದ ಕ್ರೀಡಾಪಟುಗಳಿರುವ ವಾಸ್ತವ್ಯವಿರುವ ಕ್ರೀಡಾಗ್ರಾಮಕ್ಕೆ 40 ಪೋರ್ಟಬಲ್ ಎಸಿಯನ್ನು ಕಳುಹಿಸಿಕೊಟ್ಟಿದೆ.

ಈ ಸಂಬಂಧ ಎಕ್ಸ್‌ನಲ್ಲಿ ಬರೆದುಕೊಂಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು, ಪ್ಯಾರಿಸ್‌ನಲ್ಲಿ ಈಗ 40ಡಿಗ್ರಿಯಷ್ಟು ತಾಪಮಾನವಿದೆ.

ಕ್ರೀಡಾಪಟುಗಳಿಗೆ ಸಣ್ಣ ಕೊಠಡಿಗಳು ಹಾಗೂ ಮಲಗಲು ಕಾರ್ಡ್ ಬೋರ್ಡ್ ನಿಂದ ಮಾಡಿರುವ ಬೆಡ್ ಗಳನ್ನು ನೀಡಿದ್ದಾರೆ. ಇದರಿಂದ ಉಷ್ಣತೆ ಹೆಚ್ಚಿ ಕ್ರೀಡಾಪಟುಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ ಎಂದರು.

ಈ ಸುದ್ದಿ ತಿಳಿದ ತಕ್ಷಣವೇ ಭಾರತದ ಕೇಂದ್ರ ಕ್ರೀಡಾ ಇಲಾಖೆಯು ಕೂಡಲೇ 40 ಪೋರ್ಟಬಲ್  AC ಗಳನ್ನು ಕಳುಹಿಸಿಕೊಟ್ಟಿದೆ.  ಇಷ್ಟೇ ಅಲ್ಲ ಖುದ್ದು ಪ್ರಧಾನಿ ಮೋದಿ ಜಿ ಅವರು ಪದಕ ವಿಜೇತರಿಗೆ ಹಾಗೂ ಕೂದಲೆಳೆ ಅಂತರದಲ್ಲಿ ಪದಕ ವಂಚಿತರಾದ ಕ್ರೀಡಾಪಟುಗಳಿಗೆ  ಕರೆ ಮಾಡಿ ಅವರ ಮನೋಬಲವನ್ನು ಹೆಚ್ಚಿಸುತ್ತಿದ್ದಾರೆ ಎಂದರು.

ಭಾರತವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯಾದ ಸೌಕರ್ಯ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೇಶದ ನಾಯಕತ್ವ ಸಧೃಡವಾಗಿದ್ದರೆ ನಾವು ಯಾವ ರಂಗದಲ್ಲೂ ಯಶಸ್ಸನ್ನು ಕಾಣಬಲ್ಲೆವು ಎಂಬುದಕ್ಕೆ ಇದು ಒಂದು ಸಣ್ಣ ಉದಾಹರಣೆಯಷ್ಟೇ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ