India Summer: ಈ ರಾಜ್ಯಗಳಲ್ಲಿ ಮುಂದಿನ 6ದಿನ ಬಿಸಿಗಾಳಿ ಎಚ್ಚರಿಕೆ

Sampriya

ಶುಕ್ರವಾರ, 4 ಏಪ್ರಿಲ್ 2025 (17:57 IST)
Photo Courtesy X
ನವದೆಹಲಿ: ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ಆರು ದಿನಗಳಲ್ಲಿ ವಾಯುವ್ಯ ಭಾರತವು ಬೀಸಿಗಾಳಿ ಪರಿಸ್ಥಿತಿ ಉದ್ಭವಿಸುವ ಸಾದ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ, ಇದರಿಂದ ದೆಹಲಿಯಲ್ಲಿ ತಾಪಮಾನವು 42 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆಯಿದೆ.

ದಕ್ಷಿಣ ಹರಿಯಾಣ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್, ಗುಜರಾತ್, ರಾಜಸ್ಥಾನ ಮತ್ತು ಪಶ್ಚಿಮ ಮಧ್ಯಪ್ರದೇಶಗಳಿಗೆ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದೆ.

ಮಧ್ಯ ಮತ್ತು ವಾಯುವ್ಯ ಭಾರತದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು 2 ರಿಂದ 4 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.

ಇನ್ನು ದೆಹಲಿಯಲ್ಲಿ ಏಪ್ರಿಲ್ 6 ಅಥವಾ 7ರ ವೇಳೆಗೆ ಕೆಲವು ಸ್ಥಳಗಳಲ್ಲಿ ಹಗಲಿನ ತಾಪಮಾನವು ಸುಮಾರು 42 ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು ಐಎಂಡಿ ಹೇಳಿದೆ.

ಈ ತಿಂಗಳಿನಿಂದ ಭಾರತದಲ್ಲಿ  ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಕಂಡುಬರುವ ನಿರೀಕ್ಷೆಯಿದೆ. ಮಧ್ಯ ಮತ್ತು ಪೂರ್ವ ಭಾರತ ಹಾಗೂ ವಾಯುವ್ಯ ಬಯಲು ಪ್ರದೇಶಗಳಲ್ಲಿ ಹೆಚ್ಚಿನ ಹೀಟ್ ವೇವ್ ದಿನಗಳು ಕಂಡುಬರುತ್ತವೆ ಎಂದು ಇಲಾಖೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ