ಭಾರತದಿಂದ ಸರ್ಜಿಕಲ್ ದಾಳಿ 2? ಸುಳಿವು ಕೊಟ್ಟ ಕೇಂದ್ರ ಸಚಿವ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ವಿರುದ್ಧ ಖಡಾ ಖಂಡಿತವಾಗಿ ದೊಡ್ಡ ಮಟ್ಟದ ಕ್ರಮ ಕೈಗೊಳ್ಳಲಿದ್ದೇವೆ. ಆದರೆ ಹೇಗೆ? ಯಾವಾಗ ಎನ್ನುವ ಪ್ರಶ್ನೆ ಕೇಳಬೇಡಿ. ಆ ಗುಟ್ಟು ಬಿಟ್ಟುಕೊಡುವುದಿಲ್ಲ ಎಂದು ಸಚಿವರು ಹೇಳಿದ್ದಾರೆ. ಹಾಗಾಗಿ ಪದೇ ಪದೇ ಕೆಣಕುತ್ತಿರುವ ಪಾಕ್ ಉಗ್ರರಿಗೆ ತಕ್ಕ ಪಾಠ ಕಲಿಸಲು ಭಾರತ ಯಾವ ದಾರಿ ಅನುಸರಿಸುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.