ನವದೆಹಲಿ : ಗಲ್ವಾನ್ ಗಡಿಯಲ್ಲಿ ಭಾರತ-ಚೀನಾ ಸಂಘರ್ಷದ ಹಿನ್ನಲೆಯಲ್ಲಿ ಚೀನಾಗೆ ಬುದ್ದಿ ಕಲಿಸಲು ಭಾರತ ಮುಂದಾಗಿದೆ ಎನ್ನಲಾಗಿದೆ.
ಯುದ್ಧ ವಿಮಾನ ಖರೀದಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ರಷ್ಯಾದಿಂದ 33 ಯುದ್ಧ ವಿಮಾನ ಖರೀದಿಗೆ ಮುಂದಾಗಿದ್ದು, 12 ಸುಖೋಯ್, 21 ಮಿಗ್-29 ವಿಮಾನಗಳ ಖರೀದಿ ಮಾಡುವ ನಿರ್ಧಾರ ಮಾಡಿದೆ. 5 ಸಾವಿರ ಕೋಟಿ ಮೊತ್ತದ ಯುದ್ದ ವಿಮಾನ ಖರೀದಿಗೆ ಮುಂದಾದ ಮೋದಿ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ.