ಭಾರತ ಅತೀ ದೊಡ್ಡ ಆರ್ಥಿಕತೆಯ ದೇಶವಾಗಲಿದೆ: ಅಂಬಾನಿ

ಗುರುವಾರ, 24 ಫೆಬ್ರವರಿ 2022 (06:15 IST)
ಮುಂಬೈ : 2030ರ ವೇಳೆಗೆ ಭಾರತ ವಿಶ್ವದ 3ನೇ ಅತೀ ದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್ಐಎಲ್) ಮುಖ್ಯಸ್ಥ ಮುಕೇಶ್ ಅಂಬಾನಿ ಭವಿಷ್ಯ ನುಡಿದಿದ್ದಾರೆ.

ಏಷ್ಯಾ ಆರ್ಥಿಕ ಸಂವಾದ(ಎಇಡಿ)ದಲ್ಲಿ ಮಾತನಾಡಿದ ಕೋಟ್ಯಧಿಪತಿ ಉದ್ಯಮಿ ಅಂಬಾನಿ ಈಗಿನ ಪ್ರಪಂಚದ ಮೂರನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ದೇಶ ಜಪಾನ್ಅನ್ನು ಭಾರತ ಹಿಂದಿಕ್ಕಲಿದೆ. ಈ ಮೂಲಕ ಭಾರತ ಏಷ್ಯಾದ 2ನೇ ಅತೀ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಲಿದೆ ಎಂಬ ಹೇಳಿಕೆ ನೀಡಿದ್ದಾರೆ.

ಮುಂದಿನ 20 ವರ್ಷಗಳಲ್ಲಿ ಭಾರತ ಹಸಿರು ಶಕ್ತಿ ಸೂಪರ್ ಪವರ್ ರಫ್ತು ಮಾಡುವ ರಾಷ್ಟ್ರವಾಗಲಿದೆ. ಭಾರತ ಸ್ವಾವಲಂಬಿಯಾಗಿ ಹಸಿರು ಹಾಗೂ ಶುದ್ಧ ಶಕ್ತಿಯನ್ನು ಉತ್ಪಾದಿಸುತ್ತಿದ್ದಂತೆ ಜಾಗತಿಕವಾಗಿ ಇತರ ದೇಶಗಳನ್ನು ಹಿಂದಿಕ್ಕಲು ಸಾಧ್ಯವಾಗಲಿದೆ ಎಂದು ಹೇಳಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ