ಭಾರತೀಯ ಸಂಪ್ರದಾಯದಂತೆ ಪತ್ನಿಯ ಸೀಮಂತ ಮಾಡಿದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್
ವಿನಿ ರಾಮನ್ ಮೂಲತಃ ತಮಿಳುನಾಡಿನವರು. ಮ್ಯಾಕ್ಸ್ ವೆಲ್ ವಿವಾಹ ಸಮಾರಂಭವೂ ಚೆನ್ನೈನಲ್ಲಿ ಹಿಂದೂ ಸಂಪ್ರದಾಯದಂತೆ ನಡೆದಿತ್ತು. ಇದಕ್ಕೆ ಮೊದಲು ಆಸೀಸ್ ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದರು.
ಇದೀಗ ವಿನಿ ರಾಮನ್ ತುಂಬು ಗರ್ಭಿಣಿಯಾಗಿದ್ದು ತಮಿಳು ಶೈಲಿಯಲ್ಲಿ ಸೀಮಂತ ಕಾರ್ಯಕ್ರಮ ನೆರವೇರಿದೆ. ಈ ವೇಳೆ ವಿನಿ ರಾಮನ್ ಗೆ ಗ್ಲೆನ್ ಮ್ಯಾಕ್ಸ್ ವೆಲ್ ಉಡುಗೊರೆ ನೀಡಿ ಸಂಭ್ರಮಿಸಿದ್ದಾರೆ. ಈ ಕ್ಷಣಗಳನ್ನು ವಿನಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.