ಭಾರತೀಯ ಸೇನೆಯಿಂದ ಪ್ರತಿ ದಾಳಿ ..ಪಾಕಿಸ್ತಾನದ 7 ಬಂಕರ್`ಗಳು ಉಡೀಸ್
ಸೋಮವಾರ, 8 ಮೇ 2017 (17:30 IST)
ಭಾರತೀಯ ಸೇನಾ ನೆಲೆ ಮೇಲೆ ದಾಳಿ ಮಾಡಿ ಇಬ್ಬರು ಭಾರತೀಯ ಯೋಧರ ಶಿರಚ್ಛೇದ ಮಾಡಿದ ಕ್ರೂರಿ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ಕ್ಷಿಪಣಿ ದಾಳಿ ಮಾಡಿರುವ ಭಾರತೀಯ ಸೇನೆ ಪಾಕಿಸ್ತಾನದ 7 ಬಂಕರನ್ನ ಉಡೀಸ್ ಮಾಡಿದೆ ಎನ್ನಲಾದ ವಿಡಿಯೋವೊಂದು ಆನ್ ಲೈನ್`ನಲ್ಲಿ ಹರಿದಾಡುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗುತ್ತಿದ್ದು, ಘಟನೆ ನಡೆದಿರುವುದು ಯಾವಾಗ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಕಳೆದ ವಾರ ಪಾಕಿಸ್ತಾನ ಸೇನೆ ಭಾರತ ಯೋಧರ ತಲೆ ಕಡಿದ ಪ್ರಕರಣಕ್ಕೆ ಪ್ರತಿಯಾಗಿ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಭಾರತದ ಸೇನೆ ಕಡೆಯಿಂದ ದಾಳಿ ನಡೆದಿರುವುದು ಮತ್ತು ಪಾಕಿಸ್ತಾನದ ಬಂಕ್ ಸ್ಫೋಟಗೊಳ್ಳುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಸ್ಫೋಟದ ಬಳಿಕ ಭಾರತೀಯ ಯೋಧರು ಬಂಕ್ ಸ್ಪೋಟದ ಬಗ್ಗೆ ಮಾತನಾಡುವ ಧ್ವನಿಯೂ ಇದರಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ