ಶಾಂತಿ ಸ್ಥಾಪನೆಗಾಗಿ ಭಾರತ-ಚೀನಾ ಅಧಿಕಾರಿಗಳ ಮಹತ್ವದ ಸಭೆ

ಬುಧವಾರ, 16 ಆಗಸ್ಟ್ 2017 (21:00 IST)
ಲಡಾಖ್‌‍ನಲ್ಲಿ ಭಾರತೀಯ ಮತ್ತು ಚೀನೀ ಪಡೆಗಳ ನಡುವಿನ ಚಕಮಕಿಯಾದ ಒಂದು ದಿನದ ನಂತರ, ಇಂದು  ಭಾರತ ಮತ್ತು ಚೀನಾ ಸೇನಾಪಡೆಗಳ ಉನ್ನತ ಅಧಿಕಾರಿಗಳ ಸಭೆ ನಡೆದಿದೆ.
ಇಂದು ಮಧ್ಯಾಹ್ನ ಚೌಸುಲ್‌ನಲ್ಲಿ ಪೂರ್ವ ನಿರ್ಧರಿತ ಬಾರ್ಡರ್ ಪರ್ಸನಲ್ ಮೀಟಿಂಗ್ ನಡೆದಿದೆ ಎಂದು  ಸೇನಾ ಮೂಲಗಳು ತಿಳಿಸಿವೆ.
 
ಸಭೆಯಲ್ಲಿ ಘಟನೆಗಳು ಮತ್ತು ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ "ಶಾಂತಿ ಮತ್ತು ಪರಸ್ಪರ ಸೌಹಾರ್ದತೆ ನಿಭಾಯಿಸಲು ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳ ಬಲಪಡಿಸಲು ತೀರ್ಮಾನಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
 
ನಿನ್ನೆ, ಲಡಾಖ್‌ನ ಪ್ರಸಿದ್ಧ ಪ್ಯಾಂಗೊಂಗ್ ಸರೋವರದ ದಡದಲ್ಲಿ ಭಾರತೀಯ ಗಡಿ ಪ್ರದೇಶದೊಳಗೆ ನುಗ್ಗಲು ಚೀನಾ ಸೈನಿಕರು ಪ್ರಯತ್ನಿಸಿದಾಗ ಭಾರತೀಯ ಸೇನೆ ತೀವ್ರ ಪ್ರತಿರೋಧ ತೋರಿದ್ದರಿಂದ ಎರಡು ಕಡೆಗಳ ಸೈನಿಕರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. 
 
ಪೀಪಲ್ಸ್ ಲಿಬರೇಶನ್ ಆರ್ಮಿ ಸೈನಿಕರು (ಪಿಎಲ್ಎ) ಸಂಜೆ 6 ಗಂಟೆಗೆ ಫಿಂಗರ್‌ ಫೋರ್ ಪ್ರದೇಶದಿಂದ ಮತ್ತು ರಾತ್ರಿ 9 ಗಂಟೆಗೆ ಫಿಂಗರ್ ಫೈವ್ ಪ್ರದೇಶದಿಂದ ಭಾರತದೊಳಗೆ ನುಸುಳಲು ಪ್ರಯತ್ನಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ