ಉಗ್ರ ಹಫೀಜ್‌ ಸಯೀದ್‌ ವಿರುದ್ಧ ಕ್ರಮಕ್ಕೆ ಸಾವಿರ ಮುಸ್ಲಿಂ ಮೌಲ್ವಿಗಳ ಒತ್ತಾಯ

ಗುರುವಾರ, 10 ಆಗಸ್ಟ್ 2017 (16:37 IST)
ಭಾರತದ ವಿರುದ್ಧ ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವ ಜಮಾತ್ ಉದ್ ದಾವಾ ಮುಖ್ಯಸ್ಥ, ಮುಂಬೈ ಉಗ್ರರ ದಾಳಿಯ ರೂವಾರಿ ಹಫೀಜ್ ಸಯೀದ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೇಶದ ಮುಸ್ಲಿಂ ಮೌಲ್ವಿಗಳು ಒತ್ತಾಯಿಸಿದ್ದಾರೆ.
ಮೂಲಗಳ ಪ್ರಕಾರ, ಮುಂಬೈನಲ್ಲಿರುವ ಮದ್ರಾಸಾ ದರುಲ್ ಉಲೂಮ್ ಹಸನ್ ಅಹ್ಲೆ ಸುನ್ನಾತ್‌ನಲ್ಲಿ ನಡೆದ ದೇಶದ ಸಾವಿರಕ್ಕೂ ಹೆಚ್ಚಿನ ಮುಸ್ಲಿಂ ಮೌಲ್ವಿಗಳ ಸಭೆಯಲ್ಲಿ ಹಫೀಜ್ ಸಯೀದ್ ವಿರುದ್ಧ ನಿರ್ಣಯ ಕೈಗೊಳ್ಳಲಾಯಿತು.
 
ಈ ಸಮಾರಂಭದಲ್ಲಿ ಪಾಲ್ಗೊಂಡ ಸುಮಾರು 1000 ಭಾರತೀಯ ಮುಸ್ಲಿಮ್ ಮೌಲ್ವಿಗಳು ಪಾಕಿಸ್ತಾನ ಮೂಲದ ಹಲವಾರು ಭಯೋತ್ಪಾದಕ ಸಂಘಟನೆಗಳೊಂದಿಗೆ ಹಫೀಜ್ ಸಯೀದ್ ವಿರುದ್ಧವು ಕಠಿಣ ಕ್ರಮಕೈಗೊಳ್ಳಬೇಕು ಎನ್ನುವ ನಿರ್ಣಯ ಮಂಡಿಸಿದರು.
 
ಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾದ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಉಗ್ರ ನಿಗ್ರಹ ದಳ ಸಮಿತಿಯ ಮುಖ್ಯಸ್ಥರಾದ ಅಮ್ರ ಅಬ್ದೆಲ್‌ಲತೀಫ್ ಅವರಿಗೆ ರವಾನಿಸಲಾಗಿದ್ದು, ಪ್ರಧಾನಿ ಮಂತ್ರಿ ಕಚೇರಿಗೂ ಅದರ ಪ್ರತಿ ರವಾನಿಸಲಾಗಿದೆ.
 
ಪಾಕಿಸ್ತಾನ ಎರಡೂ ಕಡೆ ಆಡುತ್ತಿದ್ದು, ಒಂದು ಕಡೆ ಅದು ಭಯೋತ್ಪಾದನೆ ವಿರುದ್ಧ ಹೋರಾಡುತ್ತೇವೆ ಎಂದು ಹೇಳುತ್ತಿದೆ  ಮತ್ತೊಂದೆಡೆ, ಅದನ್ನು ಪ್ರಚೋದಿಸುತ್ತಿದೆ ಎಂದು  ಮದ್ರಾಸಾ ದರುಲ್ ಉಲೂಮ್ ಅಲಿ ಹಸನ್ ಅಹ್ಲೆ ಸುನ್ನಾತ್‌ಗೆ ಹಾಜರಾದ ಪ್ರಮುಖ ಮೌಲ್ವಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ