ಭಾರತೀಯ ನೌಕಾಪಡೆಯು ಸ್ವದೇಶೀಕರಣದಲ್ಲಿ ಮುಂಚೂಣಿಯಲ್ಲಿ: ಕೋವಿಂದ್

ಮಂಗಳವಾರ, 7 ಸೆಪ್ಟಂಬರ್ 2021 (11:16 IST)
ದೇಶವು 5 ಲಕ್ಷ ಕೋಟಿ ಆರ್ಥಿಕತೆಯತ್ತ ಸಾಗಲು ಭಾರತೀಯ ನೌಕಾಪಡೆಯ ಸ್ವಾವಲಂಬನೆ ಅನುವು ಮಾಡಿಕೊಡಲಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಸೋಮವಾರ ಹೇಳಿದ್ದಾರೆ. ಭಾರತೀಯ ನೌಕಾಪಡೆಯ ವೈಮಾನಿಕ ಘಟಕದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಭಾರತೀಯ ನೌಕಾಪಡೆಯು ಸ್ವದೇಶೀಕರಣದಲ್ಲಿ ಮುಂಚೂಣಿಯಲ್ಲಿದೆ.

ಇದು ನೌಕಾಪಡೆಯ ಪ್ರಸ್ತುತ ಮತ್ತು ಭವಿಷ್ಯದ ಯೋಜನೆಗಳಲ್ಲಿ ಪ್ರತಿಫಲಿಸುತ್ತಿದೆ. ಇದು ಸ್ವಾವಲಂಬಿಯಾಗಿ ನಡೆಯಲಿದೆ. ಭಾರತೀಯ ನೌಕಾಪಡೆಯ ವೈಮಾನಿಕ ಘಟಕವು ಕೇಂದ್ರ ಸರ್ಕಾರದ 'ಆತ್ಮ ನಿರ್ಭರ ಭಾರತ್' ದೃಷ್ಟಿಕೋನದ ಅನುಸಾರವಾಗಿ, 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಅನುಗುಣವಾಗಿ ಸ್ಥಿರ ಪ್ರಗತಿ ಸಾಧಿಸಿದೆ' ಎಂದು ಕೋವಿಂದ್ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ