ನೌಕಾಪಡೆ ಜಾಗದಲ್ಲಿ ಇನ್ಮುಂದೆ ಡ್ರೋನ್ ಹಾರಿಸೋ ಹಾಗಿಲ್ಲ

ಭಾನುವಾರ, 11 ಜುಲೈ 2021 (10:20 IST)
ನವದೆಹಲಿ: ನೌಕಾಪಡೆಗೆ ಸೇರಿದ ಜಾಗದಲ್ಲಿ ಇನ್ನು ಡ್ರೋನ್ ಹಾರಿಸಿದರೆ ತಕ್ಕ ಶಿಕ್ಷೆ ಎದುರಿಸಬೇಕಾಗಬಹುದು! ಇಂತಹದ್ದೊಂದು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.


ಮೊನ್ನೆಯಷ್ಟೇ ಜಮ್ಮು ಕಾಶ್ಮೀರದಲ್ಲಿ ಸೇನಾ ನೆಲೆಗಳ ಮೇಲೆ ಉಗ್ರರ ಡ್ರೋನ್ ದಾಳಿಯ ಬಳಿಕ ಎಚ್ಚೆತ್ತುಕೊಂಡ ನೌಕಾಪಡೆ ತಮ್ಮಲ್ಲೂ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದ್ದಾರೆ. ನೌಕಾಪಡೆಗೆ ಸೇರಿದ 3 ಕಿ.ಮೀ. ವ್ಯಾಪ್ತಿಯೊಳಗೆ ಸಾಂಪ್ರದಾಯಿಕವಲ್ಲದ ಡ್ರೋನ್ ಮತ್ತು ಮಾನವ ರಹಿತ ವಾಹನ ಹಾರಿಸುವ ಹಾಗಿಲ್ಲ ಎಂದು ಭಾರತೀಯ ನೌಕಾಪಡೆ ಸ್ಪಷ್ಟಪಡಿಸಿದೆ.

ಆದೇಶ ಉಲ್ಲಂಘಿಸಿದವರ ವಿರುದ್ಧ ಎಫ್ ಐಆರ್ ದಾಖಲಾಗಲಿದೆ. ಅದಕ್ಕೆ ಸಂಬಂಧಿತ ಐಪಿಸಿ ಸೆಕ್ಷನ್ ಪ್ರಕಾರ ಜೈಲು ಶಿಕ್ಷೆಗೂ ಒಳಪಡಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ