ಭಾರತೀಯ ಮೂಲದ ಸಲಿಂಗಿ ವರಾಡ್ಕರ್ ಐರ್ಲೆಂಡ್ ಪ್ರಧಾನಿಯಾಗಿ ಆಯ್ಕೆ

ಶನಿವಾರ, 3 ಜೂನ್ 2017 (13:49 IST)
ಐರ್ಲ್ಯಾಂಡ್: ಭಾರತೀಯ ಮೂಲದ ಸಂಲಿಂಗಿ ಲಿಯೋ ವರಾಡ್ಕರ್ ಐರ್ಲೆಂಡ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಸಾಮಾಜಿಕ ಭದ್ರತೆ ಖಾತೆ ನಿರ್ವಹಿಸುತ್ತಿದ್ದ  38 ವರ್ಷದ ವಾರಡ್ಕರ್‌ ಅವರು ಗೃಹ ಖಾತೆ ಸಚಿವ ಸಿಮನ್‌ ಕೊವೆನೇ ಅವರನ್ನು ಭಾರೀ ಅಂತರದಿಂದ ಸೋಲುವ ಮೂಲಕ ನೂತನ ಪ್ರಧಾನಿಯಾಗಿ ದಾಖಲೆ ಬರೆದಿದ್ದಾರೆ.
 
ಹಾಲಿ ಪ್ರಧಾನಿ ಎಂಡಾ ಕೆನ್ನಿ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಚುನಾವಣೆಯಲ್ಲಿ ಭಾರೀ ಗೆಲುವು ಸಾಧಿಸುದ ವಾರಾಡ್ಕರ್ ಅವರನ್ನು ಫೈನ್ ಗೇಲ್ ಪಾರ್ಟಿ ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಿದೆ. ಈ ಮೂಲಕ ಕ್ಯಾಥೋಲಿಕ್ ರಾಷ್ಟ್ರದ ಮೊದಲ ಗೇ ಹಾಗೂ ಭಾರತೀಯ ಮೂಲದ ವ್ಯಕ್ತಿ ಉನ್ನತ ಹುದ್ದೇಗೆ ಆಯ್ಕೆಯಾಗಿದ್ದಾರೆ.
 
2015 ರಲ್ಲಿ ಸಲಿಂಗಿಗಳ ವಿವಾಹ ಕಾಯಿದೆ ತರಲು ಮತ ಚಲಾಯಿಸಿದ್ದ ವಾರಾಡ್ಕರ್ ಸಲಿಂಗಕಾಮಿ ಚಟುವಟಿಕೆಯನ್ನು ಕಾನೂನು ಬದ್ಧಗೊಳಿಸುವಲ್ಲಿ  ಧ್ವನಿಯೆತ್ತಿದ ಯುರೋಪಿಯನ್ ಒಕ್ಕೂಟದ ಸದಸ್ಯರಲ್ಲಿ ಒಬ್ಬರು.
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ