ಪಾಕ್ ಯುವಕನಿಂದ ಬಲವಂತದಿಂದ ವಿವಾಹವಾಗಿದ್ದ ಭಾರತೀಯ ಮಹಿಳೆ ಉಜ್ಮಾ ಮರಳಿ ತಾಯ್ನಾಡಿಗೆ

ಗುರುವಾರ, 25 ಮೇ 2017 (14:28 IST)
ವಾಘಾ:ಪಾಕಿಸ್ತಾನದಲ್ಲಿ ಬಲವಂತವಾಗಿ ವಿವಾಹ ಬಂಧನಕ್ಕೊಳಗಾಗಿದ್ದ ಭಾರತೀಯ ಮಹಿಳೆ ಉಜ್ಮಾ ಬಿಗಿ ಭದ್ರತೆಯೊಂದಿಗೆ ವಾಘಾ ಗಡಿ ಮೂಲಕ ಭಾರತಕ್ಕೆ ಆಗಮಿಸಿದ್ದಾರೆ. ಭಾರತದ ಗಡಿಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಉಜ್ಮಾ ಭೂಮಿಗೆ ಕೈಯನ್ನು ಸ್ಪರ್ಶಿಸುವ ಮೂಲಕ ನಮನ ಸಲ್ಲಿಸಿದರು. ಇಂದು ಸಂಜೆ ಉಸ್ಮಾ ದೆಹಲಿಗೆ ಆಗಮಿಸಿ ಮನೆಗೆ ತೆರಳಲಿದ್ದಾರೆ.
 
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮೂಲಕ ಉಜ್ಮಾ ಅವರನ್ನು ಸ್ವಾಗತಿಸಿದ್ದು, ಭಾರತದ ಮಗಳು ಎಂದು ಹೇಳಿದ್ದಾರೆ. ನಿಮಗಾಗಿರುವ ತೊಂದರೆಗೆ ಬಗ್ಗೆ ನನಗೆ ಬೇಸರವಿದ್ದು, ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
 
ಕೆಲ ದಿನಗಳ ಹಿಂದಷ್ಟೇ 20 ವರ್ಷದ ಭಾರತೀಯ ಮಹಿಳೆ ಉಜ್ಮಾ, ಪಾಕಿಸ್ತಾನ ಮೂಲದ ತಾಹಿರ್ ಅಲಿ ಎಂಬಾತ ಗನ್ ತೋರಿಸಿ ಬಲವಂತದಿಂದ ವಿವಾಹವಾಗಿದ್ದು, ನನ್ನ ವಲಸೆ ದಾಖಲೆಗಳನ್ನು ಕಸಿದುಕೊಂಡಿದ್ದಾನೆ. ಅಲ್ಲದೇ ಕಿರುಕುಳ ನೀಡುತ್ತಿದ್ದಾನೆಂದು ಆರೋಪ ಮಾಡಿದ್ದರು. ಈ ಸಂಬಂಧ ಪತಿ ತಾಹಿರ್ ಅಲಿ ವಿರುದ್ದ ಇಸ್ಲಾಮಾಬಾದ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ನೆರವಿಗೆ ಧಾವಿಸುವಂತೆ ಭಾರತೀಯ ರಾಯಭಾರಿ ಕಚೇರಿ ಬಳಿ ಮನವಿ ಮಾಡಿಕೊಂಡಿದ್ದರು. ಪ್ರಕರಣ ಸಂಬಂಧ ನಿನ್ನೆಯಷ್ಟೇ ವಿಚಾರಣೆ ನಡೆಸಿದ್ದ ಇಸ್ಲಾಮಾಬಾದ್ ಹೈಕೋರ್ಟ್ ಉಜ್ಮಾ ಅವರಿಗೆ ಭಾರತಕ್ಕೆ ಮರಳಲು ಅನುಮತಿ ನೀಡಿತ್ತು. ಅಲ್ಲದೆ, ವಾಘಾ ಗಡಿಗೆ ಹೋಗುವವರೆಗೂ ಉಜ್ಮಾ ಅವರಿಗೆ ಅಧಿಕಾರಿಗಳು ಭದ್ರತೆ ನೀಡಬೇಕು ಎಂದು ಆದೇಶಿಸಿತ್ತು.
 

ವೆಬ್ದುನಿಯಾವನ್ನು ಓದಿ