ತಾಳೆ ಎಣ್ಣೆ ರಫ್ತು ನಿಷೇಧ ವಿಸ್ತರಿಸಲು ಇಂಡೋನೇಷ್ಯಾ ಚಿಂತನೆ?

ಬುಧವಾರ, 27 ಏಪ್ರಿಲ್ 2022 (11:46 IST)
ಜಕಾರ್ತ : ಇಂಡೋನೇಷ್ಯಾ ಅಡುಗೆ ಎಣ್ಣೆಯ ಉತ್ಪಾದನೆಯಲ್ಲಿ ಬಳಸುವ ಉತ್ಪನ್ನಗಳ ಕೊರತೆ ಎದುರಿಸುತ್ತಿದ್ದು, ಇದೀಗ ತಾಳೆ ಎಣ್ಣೆ ರಫ್ತಿನ ಮೇಲೆ ನಿಷೇಧವನ್ನು ವಿಸ್ತರಿಸಲು ಚಿಂತನೆ ನಡೆಸಿದೆ.

ವಿಶ್ವದ ಅತಿದೊಡ್ಡ ತಾಳೆ ಎಣ್ಣೆ ರಫ್ತು ಮಾಡುವ ಇಂಡೋನೇಷ್ಯಾ ಸಂಸ್ಕರಿಸಿದ, ಬಿಳುಪುಗೊಳಿಸಿದ ಹಾಗೂ ಡಿಯೋಡರೈಸ್ಡ್(ಆರ್ಬಿಡಿ) ಪಾಮ್ ಓಲಿನ್ನ ಸಾಗಣೆಯನ್ನು ನಿಲ್ಲಿಸಲು ಯೋಜಿಸಿದೆ. ಆದರೂ ಗುರುವಾರದಿಂದ ಪಾಮ್ ಓಲಿನ್ ಅಥವಾ ಇತರ ಉತ್ಪನ್ನಗಳ ರಫ್ತಿಗೆ ಅವಕಾಶ ನೀಡುತ್ತದೆ ಎಂದು ವರದಿಗಳು ತಿಳಿಸಿವೆ. 

ವಿಶ್ಲೇಷಕರ ಅಂದಾಜಿನ ಪ್ರಕಾರ, ಇಂಡೋನೇಷ್ಯಾದ ತಾಳೆ ಎಣ್ಣೆ ಉತ್ಪನ್ನಗಳ ಒಟ್ಟು ರಫ್ತಿನಲ್ಲಿ ಆರ್ಬಿಡಿ ಪಾಮ್ ಓಲಿನ್ ಎಣ್ಣೆ ಸುಮಾರು ಶೇ.40 ರಷ್ಟು ಇದೆ. ಇದರ ರಫ್ತು ನಿಷೇಧದಿಂದ ಇಂಡೋನೇಷ್ಯಾದ ಗಳಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆ ಇದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ