ಸತತ 8 ನೇ ಭಾರೀ ಸ್ಚಚ್ಚ ನಗರ ಹೆಗ್ಗಳಿಕೆಗೆ ಪಾತ್ರವಾದ ಇಂದೋರ್‌, ಮೂರನೇ ಸ್ಥಾನದಲ್ಲಿ ಮೈಸೂರು

Sampriya

ಗುರುವಾರ, 17 ಜುಲೈ 2025 (15:35 IST)
Photo Credit X
ನವದೆಹಲಿ: ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ ಇಂದೋರ್ ಸತತ ಎಂಟನೇ ಬಾರಿಗೆ ಸ್ವಚ್ಛ ನಗರಗಳಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ, ಸೂರತ್ ಮತ್ತು ನವಿ ಮುಂಬೈ ನಂತರದ ಸ್ಥಾನದಲ್ಲಿದೆ.

ಸ್ವಚ್ಛ ಸಮೀಕ್ಷೆಯ ಫಲಿತಾಂಶಗಳನ್ನು ಗುರುವಾರ (ಜುಲೈ 17, 2025) ಪ್ರಕಟಿಸಲಾಗಿದೆ.

3-10 ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ, ನೋಯ್ಡಾ ಸ್ವಚ್ಛ ನಗರವಾಗಿ ಹೊರಹೊಮ್ಮಿದೆ, ನಂತರದ ಸ್ಥಾನವನ್ನು ಚಂಡೀಗಢ ಮತ್ತು ಮೈಸೂರು ಪಡೆದುಕೊಂಡಿದೆ.


ಗುರುವಾರದಂದು ಸ್ವಚ್ಛ ಸರ್ವೇಕ್ಷಣ್ 2024-25 ಪ್ರಶಸ್ತಿಗಳನ್ನು ಘೋಷಿಸಿದಂತೆ ಇಂದೋರ್ ಅನ್ನು ಅಧ್ಯಕ್ಷ ದ್ರೌಪದಿ ಮುರ್ಮು ಅವರು "ಸೂಪರ್ ಸ್ವಚ್ಛ ಲೀಗ್ ನಗರಗಳಲ್ಲಿ" ಸ್ವಚ್ಛ ನಗರವೆಂದು ಘೋಷಿಸಿದರು.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ