Mysore: ಹೊಗೆ ಉಗುಳುತ್ತಾ ಸಾಗುವ ಸರ್ಕಾರೀ ಬಸ್ ಹಿಂದೆ ಸಿಕ್ಕಿಹಾಕಿಕೊಂಡರೆ ಅಷ್ಟೇ ಕತೆ: ವಿಡಿಯೋ

Krishnaveni K

ಬುಧವಾರ, 19 ಮಾರ್ಚ್ 2025 (15:08 IST)
Photo Credit: X
ಮೈಸೂರು: ವಾಹನಗಳು ವಿಪರೀತ ಹೊಗೆ ಉಗುಳುತ್ತಿದ್ದರೆ ಸಾರಿಗೆ ಇಲಾಖೆ ದಂಢ ವಿಧಿಸುತ್ತದೆ. ಆದರೆ ಇಲ್ಲೊಂದು ಸರ್ಕಾರೀ ಬಸ್ ಹೊಗೆ ಉಗುಳುವ ಪರಿ ನೋಡಿದರೆ ಇದರ ಹಿಂದೆ ಸಿಕ್ಕಿಬಿದ್ದರೆ ದೇವರೇ ಗತಿ.  ಈ ವಿಡಿಯೋ ಈಗ ವೈರಲ್ ಆಗಿದೆ.

ಮೈಸೂರಿನ ರವಿ ಕೀರ್ತಿ ಗೌಡ ಎಂಬವರು ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಪುಟದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕೆಎ-42 ಎಫ್-1828 ಸಂಖ್ಯೆಯ ಮೈಸೂರು ಸಿಟಿ ಬಸ್ ವಿಪರೀತ ಹೊಗೆ ಉಗುಳುತ್ತಾ ಸಂಚರಿಸುವ ವಿಡಿಯೋವೊಂದನ್ನು ಅವರು ಹಂಚಿಕೊಂಡಿದ್ದಾರೆ.

ಈ ಸರ್ಕಾರೀ ಬಸ್ ಎಷ್ಟು ಹೊಗೆ ಉಗುಳುತ್ತಿದೆ ಎಂದರೆ ಅದರ ಹಿಂದೆ ಏನಾದರೂ ಸಿಕ್ಕಿ ಹಾಕಿಕೊಂಡರೆ ಉಸಿರುಕಟ್ಟಿ ಅನಾಹುತವಾಗುವುದು ಗ್ಯಾರಂಟಿ. ಇಷ್ಟೊಂದು ಹೊಗೆ ಉಗುಳುವ ವಾಹನದಿಂದ ಪರಿಸರಕ್ಕೂ ಹಾನಿ.

ಜನರಿಗೆ ಬುದ್ಧಿ ಹೇಳಬೇಕಾದ ಸರ್ಕಾರವೇ ಇಂತಹ ಡಕೋಟ ಬಸ್ ನ್ನು ರಸ್ತೆಗೆ ಬಿಟ್ಟರೆ ಹೇಗೆ? ಇದರಿಂದ ಪರಿಸರಕ್ಕೆ ಎಷ್ಟು ಹಾನಿಯಾಗುತ್ತದೆ? ಇದರ ಬಗ್ಗೆ ಪೊಲೀಸರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಡಿಯೋ ಪ್ರಕಟಿಸಿ  ಆಕ್ರೋಶ ಹೊರಹಾಕಿದ್ದಾರೆ. ಇಲ್ಲಿದೆ ಆ ವಿಡಿಯೋ ನೋಡಿ.

Gems of MYSURU CITY BUS.

Used & Dakota buses of Bengaluru are polluting Mysore like this & @KSRTC_Journeys gives lame reason such as usage of brake clutch accelerator by Driver while all the used buses from Bengaluru are smoke like this.@CPMysuru no action from Police also ,… pic.twitter.com/4cqJRsDnSZ

— ರವಿ ಕೀರ್ತಿ ಗೌಡ (@ravikeerthi22) March 19, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ