ಇಂದ್ರಾಣಿ ಮುಖರ್ಜಿ ಮೇಲೆ ಪೊಲೀಸರಿಂದ ಹಲ್ಲೆ; ಲೈಂಗಿಕ ದೌರ್ಜನ್ಯನದ ಬೆದರಿಕೆ

ಮಂಗಳವಾರ, 27 ಜೂನ್ 2017 (19:20 IST)
ಮುಂಬೈ:ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ಇಂದ್ರಾಣಿ ಮುಖರ್ಜಿ ಮೇಲೆ ಪೊಲೀಸರೇ ಹಲ್ಲೆ ನಡೆಸಿದ್ದಾರೆ ಎಂದು ಇಂದ್ರಾಣಿ ಪರ ವಕೀಲ  ಗುಂಜನ್ ಮಂಗಲಾ ಆರೋಪಿಸಿದ್ದಾರೆ.
 
ಇಂದ್ರಾಣಿ ಮುಖರ್ಜಿಯೊಂದಿಗೆ ಇದ್ದ ಸಹಖೈದಿ ಮಹಿಳೆ ಮೇಲೆ ಪೊಲೀಸರೇ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾರೆ. ಅಲ್ಲದೇ ಇದಕ್ಕೆ ಸಾಕ್ಷಿಯಾಗಿದ್ದ ಇಂದ್ರಾಣಿ ಸತ್ಯ ಬಾಯಿಬಿಡಬಾರದು ಎಂದು ಅವರ ಮೇಲೆ ಹಲ್ಲೆ ನಡಿಸಿದ್ದಾರೆ. ಈ ಸಂಬಂಧ ಕೋರ್ಟ್ ನಲ್ಲಿ ಹೇಳಿಕೆ ನೀಡಲು ಇಂದ್ರಾಣಿ ಬಯಸಿದ್ದಾರೆ ಎಂದು ಗುಂಜನ್ ತಿಳಿಸಿದ್ದಾರೆ.
 
ಸಹ ಖೈದಿ ಸಾವಿಗೆ ಸಂಬಂಧಿಸಿದಂತೆ ನನ್ನ ಬಳಿ ಮಹತ್ವ ಮಾಹಿತಿ ಇದ್ದು, ಅದನ್ನು ಹೇಳಬಾರದು ಎಂದು ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಬಾಯಿ ಬಿಟ್ಟರೆ ತನ್ನ ಮೇಲು ಲೈಂಗಿಕ ದೌರ್ಜನ್ಯ ಎಸಗುವುದಾಗಿ ಎಚ್ಚರಿಸಿದ್ದಾರೆ ಎಂದು ಇಂದ್ರಾಣಿ ತಮ್ಮ ಪರ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದು, ಈ ಸಂಬಂಧ ನಾಳೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.
 

ವೆಬ್ದುನಿಯಾವನ್ನು ಓದಿ