ಕಿರುಕುಳ ನೀಡಲು ವಿಚಾರಣೆ ನಡೆಸುತ್ತಿದ್ದಾರೆ : ಡಿಕೆಶಿ

ಮಂಗಳವಾರ, 21 ಜೂನ್ 2022 (13:20 IST)
ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿರುವ ಇಡಿ ನಿರ್ಧಾರವನ್ನು ಖಂಡಿಸಿ ಎಐಸಿಸಿ ಕಚೇರಿ ಮುಂಭಾಗದಲ್ಲಿ,

ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ಅವರು ದೆಹಲಿ ತಲುಪಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿಯಾಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರಿಗೆ ನೈತಿಕ ಬೆಂಬಲ ನೀಡಲು ಬಂದಿದ್ದೇನೆ. ಬೆಂಗಳೂರಿನಲ್ಲಿ ಹೋರಾಟ ನಡೆಸಿದ್ದೆವು. ಈಗ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ಬಂದಿದ್ದೇನೆ ಎಂದರು. 

ಗಾಂಧಿ ಪರಿವಾರವನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ. ರಾಹುಲ್ ಗಾಂಧಿ ಅವರು ಬಿಜೆಪಿ ಭಾರತ್ ಜೋಡೊ ಅಭಿಯಾನ ಆರಂಭಿಸಲು ಯೋಜನೆ ಮಾಡಿದ್ದರು.

ದೇಶದ ಉದ್ದಗಲ ಅವರು ಪಾದಯಾತ್ರೆ ಮಾಡಲು ಚಿಂತಿಸಿದ್ದರು. ಇದನ್ನು ತಡೆಯಲು ಬಿಜೆಪಿ ಇಡಿಯನ್ನು ಬಳಕೆ ಮಾಡಿಕೊಂಡಿದೆ ಎಂದು ಆಕ್ರೋಶ ಹೊರಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ