ಶೀಘ್ರದಲ್ಲೇ ಸಮ್ಮಿಶ್ರ ಸರ್ಕಾರ ಪತನ ವಾಗಲಿದೆ ಎಂದ ಪ್ರಕಾಶ್ ಜಾವ್ಡೇಕರ್

ಬುಧವಾರ, 5 ಡಿಸೆಂಬರ್ 2018 (11:48 IST)
ನವದೆಹಲಿ : ಕರ್ನಾಟಕ ರಾಜಕೀಯದಲ್ಲಿ ಭೂಕಂಪನ ಆಗಲಿದೆ. ಶೀಘ್ರದಲ್ಲೇ ಸಮ್ಮಿಶ್ರ ಸರ್ಕಾರ ಪತನ ವಾಗಲಿದೆ ಎಂದು ಮಾನವ ಸಂಪನ್ಮೂಲ ಸಚಿವ, ಕರ್ನಾಟಕ ಚುನಾವಣಾ ಉಸ್ತುವಾರಿಯೂ ಆಗಿದ್ದ ಪ್ರಕಾಶ್ ಜಾವ್ಡೇಕರ್ ಭವಿಷ್ಯ ನುಡಿದಿದ್ದಾರೆ.


ರಾಜಸ್ಥಾನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ‘ಕರ್ನಾಟಕ ರಾಜಕೀಯದಲ್ಲಿ ಯಾವಾಗ ಬೇಕಾದರೂ ಧಮಾಕ ಆಗಬಹುದು. ಈ ಸಮ್ಮಿಶ್ರ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಆಗ್ತಿಲ್ಲ. ಹೀಗಾಗಿ ಜೆಡಿಎಸ್-ಕಾಂಗ್ರೆಸ್‍ನಲ್ಲಿ ಧಮಾಕ ಆಗೋದಂತೂ ನಿಶ್ಚಿತವಾಗಿದೆ. ಆದ್ರೆ ಆ ಧಮಾಕ ಯಾವಾಗ ಅಂತ ಯಡಿಯೂರಪ್ಪ ಅಷ್ಟೇ ಹೇಳಬಹುದು’ ಎಂದು ಹೇಳಿದ್ದಾರೆ.


ಅಲ್ಲದೇ ‘ಕರ್ನಾಟಕದಲ್ಲಿ ನಾವೇ ಅತೀ ದೊಡ್ಡ ಪಕ್ಷ, ನಮಗೆ 7 ಶಾಸಕರ ಸಂಖ್ಯೆಯಷ್ಟೇ ಕೊರತೆ ಇದೆ. ಸರ್ಕಾರ ರಚನೆಗೆ ನಮಗೆ 7 ಸ್ಥಾನಗಳಷ್ಟೇ ಬೇಕಾಗಿದೆ. ಇದು ಯಾವಾಗ ಬೇಕಾದ್ರೂ ಆಗಬಹುದು. ಕರ್ನಾಟಕ ಸರ್ಕಾರ ಯಾವಾಗ ಬೇಕಾದ್ರೂ ಬೀಳಬಹುದು. ಮೈತ್ರಿ ಸರ್ಕಾರ ಒಂದು ಅಸ್ಥಿರ ಸರ್ಕಾರವಾಗಿದ್ದು, ಅನಿವಾರ್ಯದ ಮೈತ್ರಿಯನ್ನು ಮಾಡಿಕೊಂಡಿದ್ದಾರೆ. ಇವರ ನಡುವೆ ಯಾವುದೇ ರೀತಿಯ ಹೊಂದಾಣಿಕೆ ಇಲ್ಲ ಅಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ