ಭಾರಿ ಮಳೆಗೆ ವಿಮಾನಗಳ ಮಾರ್ಗ ಬದಲು!

ಮಂಗಳವಾರ, 24 ಮೇ 2022 (13:06 IST)
ನವದೆಹಲಿ : ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣದ ಸಮಯ ಅದಲು ಬದಲಾಗಿದೆ.
 
ಪ್ರತಿಕೂಲ ಹವಾಮಾನದಿಂದ 19 ವಿಮಾನಗಳ ಮಾರ್ಗ ಬದಲು ಮಾಡಲಾಗಿದೆ. ಇನ್ನು 60ಕ್ಕೂ ಹೆಚ್ಚು ವಿಮಾನಗಳು ವಿಳಂಭವಾಗಿದೆ.

ದೆಹಲಿಯಿಂದ ನಿರ್ಗಮಿಸುವ ಹಾಗೂ ಆಗಮಿಸುವ 60ಕ್ಕೂ ಹೆಚ್ಚು ವಿಮಾನಗಳು ವಿಳಂವಾಗಿದೆ. ಮಳೆ ಹಾಗೂ ಪ್ರತಿಕೂಲ ಹವಾಮಾನದಿಂದ ದೆಹಲಿಗೆ ಆಗಮಿಸಬೇಕಿದ್ದ ವಿಮಾನಗಳನ್ನು ಜೈಪುರ, ಲಖನೌ, ಇಂದೋರ್, ಅಹಮದಾಬಾದ್ ಹಾಗೂ ಅಮೃತಸರಕ್ಕೆ ಮಾರ್ಗ ಬದಲಿಸಲಾಗಿದೆ.

ದೆಹಲಿ ವಿಮಾನ ನಿಲ್ದಾಣ ಪ್ರಯಾಣಿಕರಲ್ಲಿ ವಿಶೇಷ ಮನವಿ ಮಾಡಿಕೊಂಡಿದೆ. ಮಳೆಯಿಂದಾಗಿ ವಿಮಾನ ಪ್ರಯಾಣದಲ್ಲಿ ಅಡಚಣೆಯಾಗಿದೆ. ದಯವಿಟ್ಟು ತಮ್ಮ ತಮ್ಮ ಏರ್ಲೈನ್ಸ್ ಜೊತೆ ಸಂಪರ್ಕದಲ್ಲಿರಲು ಸೂಚನೆ ನೀಡಿದೆ.

ಮಳೆಯಿಂದಾಗಿ ದೆಹಲಿಯಲ್ಲಿ ವಿದ್ಯುತ್ ಕಡಿತಗೊಂಡಿದೆ. ಹೀಗಾಗಿ ಹಲವು ಭಾಗಗಳು ಕತ್ತಲಲ್ಲಿ ಮುಳುಗಿದೆ. ರಸ್ತೆಗಳು ನದಿಯಂತಾಗಿದೆ.

ಮಳೆಯಿಂದಾಗಿ ದೆಹಲಿಯಲ್ಲಿ ವಿದ್ಯುತ್ ಕಡಿತಗೊಂಡಿದೆ. ಹೀಗಾಗಿ ಹಲವು ಭಾಗಗಳು ಕತ್ತಲಲ್ಲಿ ಮುಳುಗಿದೆ. ರಸ್ತೆಗಳು ನದಿಯಂತಾಗಿದೆ. ದೆಹಲಿಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಇದೀಗ ದೆಹಲಿ ಮಹಾ ಮಳೆ ಪರಿಸ್ಥಿತಿ ಎದುರಿಸುತ್ತಿದೆ. ಭಾರಿ ಮಳೆಯಾಗುತ್ತಿರುವ ಕಾರಣ ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ