ಐಪಿಎಸ್‌ ಅಧಿಕಾರಿ ವೈ.ಪೂರನ್‌ ಕುಮಾರ್‌ ಆತ್ಮಹತ್ಯೆಯ ಕಾರಣ ಬಹಿರಂಗಪಡಿಸಿದ ಪತ್ನಿ ಅಮ್ನೀತ್‌

Sampriya

ಗುರುವಾರ, 9 ಅಕ್ಟೋಬರ್ 2025 (14:05 IST)
Photo Credit X
ಚಂಡೀಗಢ: ಹರಿಯಾಣದ ಹಿರಿಯ ಐಪಿಎಸ್‌ ಅಧಿಕಾರಿ ವೈ ಪೂರನ್‌ ಕುಮಾರ್‌ ಅವರು, ಚಂಡೀಗಢನಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ವೈ.ಪೂರನ್‌ ಕುಮಾರ್‌ (52) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಹಾಗೂ ಐಎಎಸ್ ಅಧಿಕಾರಿಯೂ ಆಗಿರುವ ಅಮ್ನೀತ್‌ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಪತಿ ಸಾವಿಗೆ ಹಿರಿಯ ಅಧಿಕಾರಿಗಳ ವ್ಯವಸ್ಥಿತ ಕಿರುಕುಳವೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಅಡಿ ದೂರು ದಾಖಲಿಸಿ ಹರಿಯಾಣದ 13 ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಒತ್ತಾಯ ಮಾಡಿದ್ದಾರೆ.

2001ನೇ ಬ್ಯಾಚಿನ ಐಪಿಎಸ್‌ ಅಧಿಕಾರಿಯಾಗಿದ್ದ ಅವರು, ರೋಹಟಕ್‌ನ ಸುನರಿಯಾದ  ಪೊಲೀಸ್ ತರಬೇತಿ ಕೇಂದ್ರದ ಐಜಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಲ್ಲಿಗೆ ವರ್ಗಾವಣೆ ಆಗಿ ಬರುವ ಮುನ್ನ ಅವರು ರೋಹಟಕ್‌ ವಲಯದ ಐಜಿಪಿ ಆಗಿದ್ದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ