ತೇಜಸ್ವಿ ಯಾದವ್ ಬದಲು ತೇಜಸ್ವಿ ಸೂರ್ಯಗೆ ಹಿಗ್ಗಾಮುಗ್ಗಾ ಜಾಡಿಸಿದ ಕಂಗನಾ ರಣಾವತ್

Sampriya

ಸೋಮವಾರ, 6 ಮೇ 2024 (15:30 IST)
Photo Courtesy X
ಬೆಂಗಳೂರು:  ನಟಿ-ರಾಜಕಾರಣಿ ಕಂಗನಾ ರಣಾವತ್ ಅವರು ಪ್ರತಿಪಕ್ಷದ ನಾಯಕನನ್ನು ಟೀಕಿಸಲು ಹೋಗಿ ತಮ್ಮ ಬಿಜೆಪಿ ಅಭ್ಯರ್ಥಿಯ ಮೇಲೆಯೇ ದಾಳಿ ನಡೆಸಿ, ಇದೀಗ ಟ್ರೋಲ್‌ಗೆ ಒಳಗಾಗಿದ್ದಾರೆ.

ಲೋಕಸಭೆ ಚುನಾವಣೆಯ ಪ್ರಚಾರದ ಭಾಷಣದಲ್ಲಿ ತೇಜಸ್ವಿ ಯಾದವ್‌ರನ್ನು ಟೀಕಿಸುವ ಭರದಲ್ಲಿ ತಮ್ಮದೇ ಪಕ್ಷದ ಬೆಂಗಳೂರು ದಕ್ಷಿಣದ  ಅಭ್ಯರ್ಥಿ ತೇಜಸ್ವಿ ಸೂರ್ಯರ ಅವರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಹಾಳಾದ ರಾಜಕುಮಾರರ ಪಕ್ಷವಿದೆ. ಚಂದ್ರನ ಮೇಲೆ ಆಲೂಗಡ್ಡೆ ಬೆಳೆಯಲು ಬಯಸುವ ರಾಹುಲ್ ಗಾಂಧಿಯಾಗಲಿ ಅಥವಾ ಗೂಂಡಾಗಿರಿ ಮಾಡಿ ಮೀನು ತಿನ್ನುವ ತೇಜಸ್ವಿ ಸೂರ್ಯ ಆಗಲಿ ಎಂದು ಮಾತಿನ ಭರದಲ್ಲಿ ತಮ್ಮದೇ ಪಕ್ಷದ ಸಂಸದನನ್ನು ಟೀಕಿಸಿದರು.

ಆರ್‌ಜೆಡಿ ನಾಯಕಿ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಮೀನು ತಿನ್ನುತ್ತಿರುವ ವೀಡಿಯೊವನ್ನು ಬಿಜೆಪಿ ಚರ್ಚೆಗೆ ಗುರಿಮಾಡಿತ್ತು.

ಈ ಮಧ್ಯೆ, ಕಂಗನಾ ರಣಾವತ್ ಅವರು ತಪ್ಪಾಗಿ ಹೇಳಿರುವ ವಿಡಿಯೋವನ್ನು ಎಕ್ಸ್‌ನಲ್ಲಿ ಶೇರ್ ಮಾಡಿದ ಯಾದವ್ ಅವರು "ಯೇ ಮೊಹತರ್ಮಾ ಕೌನ್ ಹೈ?" (ಈ ಮಹಿಳೆ ಯಾರು?), ಎಂದು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ