ಹಿಂದೂ ಧರ್ಮಕ್ಕೆ ಅವಮಾನ ಆರೋಪ: ರಾಹುಲ್ ವಿರುದ್ಧ ಮತ್ತೇ ಗುಡುಗಿದ ಮೋದಿ

Sampriya

ಮಂಗಳವಾರ, 19 ಮಾರ್ಚ್ 2024 (15:43 IST)
Photo Courtesy X
ತಮಿಳುನಾಡು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೀಡಿದ್ದ 'ಶಕ್ತಿ" ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನಲ್ಲಿ ವಾಗ್ದಾಳಿ ನಡೆಸಿದರು. 
 
ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 
ಕಾಂಗ್ರೆಸ್ ಮತ್ತು ಡಿಎಂಕೆಯ ಭಾರತೀಯ ಮೈತ್ರಿಕೂಟವು  ಪದೇ ಪದೇ ಹಿಂದೂ ಧರ್ಮವನ್ನು ಅವಮಾನಿಸುತ್ತಲೇ ಬಂದಿದೆ. ಹಿಂದೂ ಧರ್ಮದಲ್ಲಿ ಶಕ್ತಿ ಎಂದರೆ "ಮಾತೃ ಶಕ್ತಿ, ನಾರಿ ಶಕ್ತಿ" ಎಂದರು. 
 
ಈ ಶಕ್ತಿಯನ್ನು ಕಾಂಗ್ರೆಸ್, ಡಿಎಂಕೆಯ ಮೈತ್ರಿ ಕೂಟವು ನಾಶ ಮಾಡಲು ಮುಂದಾಗಿದೆ.  ಶಕ್ತಿಯು ದೈವಿಕತೆಯನ್ನು ಸೂಚಿಸುತ್ತದೆ ಮತ್ತು ರಾಜ್ಯದಲ್ಲಿ ಮಾರಿಯಮ್ಮನ್, ಮಧುರೈ ಮೀನಾಕ್ಷಿಯಮ್ಮನ್ ಮತ್ತು ಕಂಚಿ ಕಾಮಾಕ್ಷಿಯಮ್ಮನಂತಹ ವಿವಿಧ ದೇವತೆಗಳ ರೂಪದಲ್ಲಿದ್ದಾರೆ. 
 
"ಶಕ್ತಿಯ ನಾಶದ ಬಗ್ಗೆ ಮಾತನಾಡುವವರಿಗೆ ತಮಿಳುನಾಡು ಶಿಕ್ಷೆ ನೀಡಲಿದೆ. ನಾನು ಶಕ್ತಿ ಉಪಾಸಕ (ಆರಾಧಕ)" ಎಂದು ರಾಹುಲ್ ಗಾಂಧಿ ವಿರುದ್ಧ ಗುಡುಗಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ