ಲಕ್ನೋ: ಯೋಧರನ್ನು ಗುಂಡೇಟಿನಿಂದ ಕಾಪಾಡಲು ವ್ಯಕ್ತಿಯೊಬ್ಬರು ಗುಂಡೇಟನ್ನು ತಡೆಯಬಲ್ಲ ‘ಐರನ್ ಮ್ಯಾನ್ ಸೂಟ್’ ನ್ನು ತಯಾರಿಸಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯ ಶಾಮ್ ಚೌರಾಸಿಯಾ ಎಂಬುವವರು ಅಶೋಕ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ಆ್ಯಂಡ್ ಮ್ಯಾನೇಜ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದು, ಯೋಧರ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವ ಇವರು ಈ ಸೂಟ್ ನ್ನು ತಯಾರಿಸಿದ್ದಾರೆ.
ಈ ಸೂಟ್ ಲೋಹದಿಂದ ತಯಾರಿಸಿದ್ದು, ಇದರಲ್ಲಿ ಗೇರ್ಸ್ ಹಾಗೂ ಮೋಟರ್ ಗಳನ್ನು ಅಳವಡಿಸಲಾಗಿದೆ. ಅಲ್ಲದೇ ಇದರಲ್ಲೊಂದು ಮೊಬೈಲ್ ಕನೆಕ್ಷನ್, ಸೆನ್ಸರ್ ಗಳನ್ನು ಅಳವಡಿಸಲಾಗಿದ್ದು, ಇದು ಶತ್ರುಗಳ ದಾಳಿ ನಡೆಸುವ ಮುನ್ನ ಯೋಧರನ್ನು ಎಚ್ಚರಿಸುತ್ತದೆ ಎಂಬುದಾಗಿ ಅವರು ತಿಳಿಸಿದ್ದಾರೆ.