ಬೂಸ್ಟರ್ ಡೋಸ್ ಪಡೆಯಲು ICMR ಅನುಮತಿ?
ಈ ಹೊತ್ತಲ್ಲಿಯೇ ಬೂಸ್ಟರ್ ಡೋಸ್ಗೆ ಸಂಬಂಧಿಸಿದ ವರದಿಯನ್ನು ಸಂಸದೀಯ ಸಮಿತಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಲ್ಲಿಸಿದೆ. ಅದರ ಪ್ರಕಾರ, ತುರ್ತು ಸಂದರ್ಭ ಇದ್ದಲ್ಲಿ ಬೂಸ್ಟರ್ ಡೋಸ್ ನೀಡಲು ಅನುಮತಿ ನೀಡಿದೆ ಎಂದು ವರದಿಯಾಗಿದೆ.
ಬೂಸ್ಟರ್ ಡೋಸ್ ತುರ್ತು ಸಂದರ್ಭದಲ್ಲಿ ತೆಗೆದುಕೊಳ್ಳುವ ಮೊದಲು ಕೆಲ ಸಲಹೆಗಳನ್ನು ಪಾಲಸಲು ತಿಳಿಸಿದೆ. ಎರಡನೇ ಡೋಸ್ ತೆಗೆದುಕೊಂಡ 9 ತಿಂಗಳ ನಂತರ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಅನುಮತಿ ಕೊಟ್ಟಿದೆ. ಓಮಿಕ್ರಾನ್ ಮತ್ತು ಕೊರೊನಾ ಇತರ ತಳಿ ಬಗ್ಗೆ ಐಸಿಎಂಆರ್ ಕೇಂದ್ರಕ್ಕೆ ಸಲಹೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯೇ ಬೂಸ್ಟರ್ ಡೋಸ್ ನೀಡಿಕೆ ಸಂಬಂಧ ಖಚಿತ ನಿಲುವಿಗೆ ಬಾರದ ಹಿನ್ನೆಲೆಯಲ್ಲಿ ಇನ್ನಷ್ಟು ದಿನಗಳ ಕಾಲ ಕಾದು ನೋಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.