ಚಂದ್ರಯಾನ 2: ಕೊನೆಗೂ ವಿಕ್ರಮ ಗೋಚರ, ಇಸ್ರೋಗೆ ಹೊಸ ಭರವಸೆ

ಸೋಮವಾರ, 9 ಸೆಪ್ಟಂಬರ್ 2019 (09:00 IST)
ಬೆಂಗಳೂರು: ಚಂದ್ರನ ಮೇಲೆ ಇಳಿಯುವ ಕೆಲವೇ ಕಿ.ಮೀ. ಮೊದಲು ಸಂಪರ್ಕರ ಕಳೆದುಕೊಂಡಿದ್ದ ವಿಕ್ರಮ್ ಲ್ಯಾಂಡರ್ ಪತ್ತೆಯಾಗಿದ್ದು, ಇಸ್ರೋ ವಿಜ್ಞಾನಿಗಳಲ್ಲಿ ಹೊಸ ಭರವಸೆ ಮೂಡಿದೆ.


ಚಂದ್ರನಿಂದ 100 ಕಿ.ಮೀ. ದೂರದಲ್ಲಿ ಸುತ್ತುತ್ತಿರುವ ಆರ್ಬಿಟರ್ ಸೆರೆಹಿಡಿದ ಚಿತ್ರವನ್ನು ವಿಶ್ಲೇಷಿಸಿ ವಿಕ್ರಮ್ ಲ್ಯಾಂಡರ್ ನ ಸ್ಥಳವನ್ನು ಕಂಡುಕೊಳ್ಳಲಾಗಿದೆ. ಹೀಗಾಗಿ ವಿಕ್ರಮ್ ಜತೆಗೆ ಸಂಪರ್ಕ ಸಾಧಿಸುವ ಪ್ರಯತ್ನ ಮುಂದುವರಿಸಲಾಗಿದೆ.

ಈ ಸಂತೋಷದ ವಿಚಾರವನ್ನು ಪ್ರಕಟಿಸಿರುವ ಇಸ್ರೋ ಅಧ್ಯಕ್ಷ ಕೆ ಶಿವನ್ ವಿಕ್ರಮ್ ಚಂದ್ರನ ಮೇಲೆ ಹಾರ್ಡ್ ಲ್ಯಾಂಡಿಂಗ್ ಆಗಿರುವ ಸಾಧ‍್ಯತೆಯಿದೆ ಎಂದಿದ್ದಾರೆ. 2.1 ಕಿ.ಮೀ. ಇದ್ದಾಗ ನಿಧಾನವಾಗಿ ಇಳಿಯಲು ಸಾಧ್ಯವಾಗದೇ ಚಂದ್ರನ ಮೇಲೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಬೀಳುವಾಗ ಯಾವುದಾದರೂ ಹಾನಿಯಾಗಿರಬಹುದೇ ಎಂದು ಈಗ ಪತ್ತೆ ಹೆಚ್ಚಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ