ಚಂದ್ರಯಾನ ವಿಫಲವಾಗಿದ್ದಕ್ಕೆ ಅಳುತ್ತಿದ್ದ ಇಸ್ರೋ ಅಧ್ಯಕ್ಷರನ್ನು ಅಪ್ಪಿ ಸಂತೈಸಿದ ಪ್ರಧಾನಿ ಮೋದಿ

ಶನಿವಾರ, 7 ಸೆಪ್ಟಂಬರ್ 2019 (10:01 IST)
ಬೆಂಗಳೂರು: ಜಗತ್ತೇ ಕುತೂಹಲದಿಂದ ಕಾಯುತ್ತಿದ್ದ ಚಂದ್ರಯಾನ 2 ರೋವರ್ ವಿಕ್ರಮ ಸಂಪರ್ಕ ಕಡಿದುಕೊಂಡು ಒಂದು ರೀತಿಯ ವೈಫಲ್ಯ ಅನುಭವಿಸಿದ ಬೇಸರದಲ್ಲಿ ಇಸ್ರೋದ ವಿಜ್ಞಾನಿಗಳು ತೀರಾ ಸಪ್ಪಗಾಗಿದ್ದರು. ತಾವು ಅಂದುಕೊಂಡಿದ್ದನ್ನು ಸಾಧಿಸಲಾಗದ ನಿರಾಸೆ ಅವರ ಮೊಗದಲ್ಲಿತ್ತು.

 

ಆದರೆ ಅಲ್ಲಿದ್ದ ಪ್ರಧಾನಿ ಮೋದಿ ನಿಮ್ಮ ಜತೆಗೆ ನಾನಿದ್ದೇನೆ. ನೀವು ಸಣ್ಣ ಸಾಧನೆ ಮಾಡಿಲ್ಲ ಎಂದು ಸಪ್ಪಗೆ ನಿಂತಿದ್ದ ವಿಜ್ಞಾನಿಗಳ ಬೆನ್ನುತಟ್ಟಿ ಪ್ರೋತ್ಸಾಹದ ಮಾತನಾಡಿದ್ದರು.

ಆದರೆ ಇಸ್ರೋ ಅಧ‍್ಯಕ್ಷ ಕೆ ಶಿವನ್ ಗೆ ಪ್ರಧಾನಿ ಮೋದಿಯನ್ನು ಬೀಳ್ಕೊಡುವಾಗ ದುಃಖ ತಡೆಯಲಾಗಲಿಲ್ಲ. ಪ್ರಧಾನಿ ಹೆಗಲಿಗೊರಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ ಕೆಲವು ಕಾಲ  ಅವರ ಬೆನ್ನು ತಡವಿ ಸಂತೈಸಿದರು. ಬಳಿಕ ಶಿವನ್ ಸಾರಿ ಎಂದು ಕಣ್ಣೀರು ಮಿಡಿಯುತ್ತಲೇ ಹೇಳಿದರೆ ಪ್ರಧಾನಿ ಮೋದಿ ಅವರ ಕೈಕುಲುಕಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದನ್ನು ನೋಡುತ್ತಿದ್ದ ಅಲ್ಲಿ ನೆರೆದಿದ್ದವರ ಕಣ್ಣಗಳೂ ಹನಿಗೂಡಿದ್ದವು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ