ಕೌರವರು-ಪಾಂಡವರ ಮಧ್ಯದ ಪವಿತ್ರ ಯುದ್ಧ: ಬಿಜೆಪಿಗೆ ಕೇಜ್ರಿವಾಲ್ ವಾರ್ನಿಂಗ್

ಸೋಮವಾರ, 25 ಜುಲೈ 2016 (14:36 IST)
ಆಮ್ ಆದ್ಮಿ ಪಕ್ಷದ ಸರಕಾರ ಮತ್ತು ದೆಹಲಿ ಅಭಿವೃದ್ಧಿಗೆ ಅಡ್ಡಿಯಾಗಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಮಧ್ಯೆ ಪಾಂಡವರು ಕೌರವರ ಮಧ್ಯೆ ನಡೆದಂತೆ ಪವಿತ್ರ ಯುದ್ಧ ಆರಂಭವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
 
ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾಖಾನ್‌ರನ್ನು ಪೊಲೀಸರು ಬಂಧಿಸಿದ ನಂತರ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಜ್ರಿವಾಲ್, ಮೋದಿ ಸರಕಾರ ಸಿಬಿಐ ಮತ್ತು ಇಡಿ ಇಲಾಖೆಗಳನ್ನು ವಿಪಕ್ಷಗಳನ್ನು ಹಣೆಯಲು ಬಳಸಿಕೊಳ್ಳುತ್ತಿದೆ ಎಂದು ಗುಡುಗಿದರು. 
 
ದೆಹಲಿ ಚುನಾವಣೆಯ ಸೋಲನ್ನು ಮೋದಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಲ್ಲಾ ತನಿಖಾ ಸಂಸ್ಥೆಗಳನ್ನು ನಮ್ಮ ವಿರುದ್ಧ ಛೂ ಬಿಡಲಾಗಿದೆ. ಇದೊಂದು ಕೌರವರು ಮತ್ತು ಪಾಂಡವರ ನಡುವೆ ನಡೆಯುತ್ತಿರುವ ಪವಿತ್ರ ಯುದ್ಧ ಎಂದು ಬಣ್ಣಿಸಿದರು.
 
ಪ್ರಧಾನಿ ಮೋದಿ ಒಂದು ವೇಳೆ ಇಂತಹ ಹೀನ ಕೃತ್ಯಗಳನ್ನು ನಿಲ್ಲಿಸದಿದ್ದಲ್ಲಿ ಪಂಜಾಬ್, ಗೋವಾ ಮತ್ತು ಗುಜರಾತ್ ರಾಜ್ಯಗಳಲ್ಲಿ ಬಿಜೆಪಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು. 
 
ಮೋದಿಗೆ ತಾಕತ್ತಿದ್ರೆ ದೆಹಲಿಯ ಅಭಿವೃದ್ಧಿಯನ್ನು ತಡೆಯಲಿ. ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ಜಾರಿಗೆ ತಂದ ಶಿಕ್ಷಣ ಸುಧಾರಣೆ ನೀತಿಗಳನ್ನು ನಿಲ್ಲಸಲಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುಡುಗಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ