ಅವಧಿಗೂ ಮುನ್ನ ರಾಜೀನಾಮೆ ನೀಡಿದ ಉಪರಾಷ್ಟ್ರಪತಿಗಳು ಯಾರೆಲ್ಲಾ ಇಲ್ಲಿದೆ ಲಿಸ್ಟ್

Krishnaveni K

ಮಂಗಳವಾರ, 22 ಜುಲೈ 2025 (11:29 IST)
ನವದೆಹಲಿ: ಭಾರತದ ಇತಿಹಾಸದಲ್ಲೇ ಅವಧಿಗೂ ಮುನ್ನವೇ ರಾಜೀನಾಮೆ ನೀಡಿದ ಉಪರಾಷ್ಟ್ರಪತಿಗಳಲ್ಲಿ ಜಗದೀಪ್ ಧನ್ಕರ್ ಕೇವಲ ಮೂರನೆಯವರು. ಉಳಿದ ಇಬ್ಬರು ಯಾರು ಇಲ್ಲಿದೆ ವಿವರ.

ನಿನ್ನೆ ರಾತ್ರಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅನಾರೋಗ್ಯದ ನಿಮಿತ್ತ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ರಾಷ್ಟ್ರಪತಿಗಳಿಗೆ ರಾಜೀನಾಮೆ ಪತ್ರ ರವಾನಿಸಿದ್ದರು. ಇದು ಎಲ್ಲರಿಗೂ ಶಾಕ್ ಮತ್ತು ಅಚ್ಚರಿ  ಉಂಟು ಮಾಡಿತ್ತು.

ಸಂಸತ್ ಅಧಿವೇಶನ ಆರಂಭದ ದಿನವೇ ಜಗದೀಪ್ ಧನ್ಕರ್ ರಾಜೀನಾಮೆ ಸಲ್ಲಿಸಿದ್ದರ ಬಗ್ಗೆ ಎಲ್ಲರಿಗೂ ಅಚ್ಚರಿಯಾಗಿದೆ. ಇನ್ನು ಜಗದೀಪ್ ಧನ್ಕರ್ ಗಿಂತ ಮೊದಲು ಈ ರೀತಿ ಅವಧಿ ಪೂರ್ಣವಾಗಿ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು ಕೇವಲ ಇಬ್ಬರೇ ಇಬ್ಬರು.

ಅವರಲ್ಲಿ ಒಬ್ಬರು ವಿವಿ ಗಿರಿ ಮತ್ತು ಇನ್ನೊಬ್ಬರು ಭೈರೋನ್ ಸಿಂಗ್ ಶೆಖಾವತ್. 1969 ರಲ್ಲಿ ವಿವಿ ಗಿರಿ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು. 2007 ರಲ್ಲಿ ಶೆಖಾವತ್ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿ ಸೋತ ಬಳಿಕ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರನ್ನು ಬಿಟ್ಟರೆ ಈಗ ಜಗದೀಪ್ ಧನ್ಕರ್ ರಾಜೀನಾಮೆ ಸಲ್ಲಿಸಿದ ಮೂರನೆಯ ಉಪರಾಷ್ಟ್ರಪತಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ