Jammu Kashmir attack: ಜಮ್ಮು ಕಾಶ್ಮೀರದಲ್ಲಿ ರೆಸಾರ್ಟ್ ಮೇಲೆ ಪಾಕ್ ಉಗ್ರರ ದಾಳಿ: ಇಬ್ಬರ ಸಾವು, ಪ್ರವಾಸಿಗರಲ್ಲಿ ಭಯ

Krishnaveni K

ಮಂಗಳವಾರ, 22 ಏಪ್ರಿಲ್ 2025 (17:10 IST)
Photo Credit: X
ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರ ಸೇಫ್ ಆಗಿದೆ ಎಂದು ಬೇಸಿಗೆಯಲ್ಲಿ ಕಣಿವೆ ರಾಜ್ಯಕ್ಕೆ ಪ್ರವಾಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಈಗ ರೆಸಾರ್ಟ್ ಒಂದರ ಮೇಲೆ ಪಾಕ್ ಪ್ರೇರಿತ ಉಗ್ರರು ದಾಳಿ ನಡೆಸಿದ್ದು ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದು ಹಲವರಿಗೆ ಗಾಯಗಳಾಗಿರುವ ವರದಿಯಾಗಿದೆ.

ಪಾಕಿಸ್ತಾನದ ಲಷ್ಕರ್ ತೊಯ್ಬಾ ಸಂಘಟನೆಯ ಅಂಗವಾಗಿರುವ ಟಿಆರ್ ಎಫ್ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಪೆಹಲ್ಗಾಂನ ರೆಸಾರ್ಟ್ ಗುರಿಯಾಗಿರಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರೆ 12 ಮಂದಿಗೆ ಗಾಯಗಳಾಗಿವೆ.

ಭಾರತೀಯ ಸೇನೆಯ ಡ್ರೆಸ್ ನಲ್ಲೇ ಬಂದು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಇಲ್ಲಿ ಕುದುರೆ ಸವಾರಿ, ಟ್ರಕ್ಕಿಂಗ್ ಮಾಡಲೆಂದೇ ಪ್ರವಾಸಿಗರು ಸೇರುತ್ತಾರೆ. ಬೇಸಿಗೆಯ ಸಂದರ್ಭದಲ್ಲಿ ಇಲ್ಲಿ ಪ್ರವಾಸ ಮಾಡಲು ಬೆಸ್ಟ್ ತಾಣವಾಗಿದೆ.

ಹೀಗಾಗಿ ಇಲ್ಲಿ ಪ್ರವಾಸ, ಅಭಿವೃದ್ಧಿ ಕಾರ್ಯಗಳು ನಡೆಯಬಾರದು ಎಂಬ ಉದ್ದೇಶಕ್ಕೇ ಉಗ್ರರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಗಾಯಗೊಂಡವರನ್ನು ಸೇನೆ ತಕ್ಷಣವೇ ಹೆಲಿಕಾಪ್ಟರ್ ಮೂಲಕ ಸ್ಥಳದಿಂದ ಆಸ್ಪತ್ರೆಗೆ ಸಾಗಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ