ಎಐಡಿಎಂಕೆ ವರಿಷ್ಠೆ ಜಯಾ (68) ಕಳೆದ ತಿಂಗಳ 22 ರಂದು ಜ್ವರ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಅವರ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆಯಾಗಿದ್ದು ನವೆಂಬಕ್ 18 ರಂದು ಅರವಕುರಿಚಿ, ತಂಜಾವೂರ್ ಮತ್ತು ತಿರುಪರನ್‌ಕುಂದರಮ್‌ನಲ್ಲಿ ನಡೆಯಲಿರುವ ಪಕ್ಷದ ಚುನಾವಣಾ ಡ್ಯೂಟಿಗೆ 18 ಸಚಿವರ ನೇಮಕಕ್ಕೆ ಬುಧವಾರ ಅನುಮೋದನೆ ನೀಡಿದ್ದಾರೆ. ದೀಪಾವಳಿಗೆ ಅವರು ತಮ್ಮ ನಿವಾಸಕ್ಕೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ.