ಅಮ್ಮನ ಹೆಸರಲ್ಲಿ ದೀಪಾ ಜಯಕುಮಾರ್ ಹೊಸ ಪಕ್ಷ

ಸೋಮವಾರ, 13 ಫೆಬ್ರವರಿ 2017 (06:53 IST)
ತಮಿಳುನಾಡಿನಲ್ಲಿ ಕ್ಷ್ರಿಪ್ರ ರಾಜಕೀಯ ಬೆಳವಣಿಗೆ ಪರ್ವ ಮುಂದುವರೆದಿದ್ದು, ತಮ್ಮ ಅತ್ತೆಯ ಸಾವಿನ ಬಳಿಕ  ಶಶಿಕಲಾ ನಟರಾಜನ್ ವಿರುದ್ಧ ಸಿಡಿದೆದ್ದಿರುವ ದಿವಂಗತ ಜಯಲಲಿತಾ ಅಣ್ಣನ ಮಗಳು ದೀಪಾ ಜಯಕುಮಾರ್ ಹೊಸ ಪಕ್ಷ ರಚನೆ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಎಂಜಿಆರ್ ಜನ್ಮದಿನ ತಮ್ಮ ರಾಜಕೀಯ ಪ್ರವೇಶವನ್ನು ಘೋಷಿಸಿದ್ದ ಅವರು ತಾನು ಹೊಸ ಪಕ್ಷ ಕಟ್ಟುತ್ತೇನೋ ಅಥವಾ ಎಐಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೋ ಎಂಬುದನ್ನು ಬಹಿರಂಗ ಪಡಿಸುವುದಾಗಿ ಹೇಳಿದ್ದರು. ಆದರೆ ನಿರೀಕ್ಷೆಯಂತೆ ಅವರು ಹೊಸ ಪಕ್ಷ ರಚನೆಗೆ ಮುಂದಾಗಿದ್ದು ಅದಕ್ಕೆ ಅಮ್ಮ ಡಿಎಂಕೆ ಎಂದು ಹೆಸರಿಡಲಿದ್ದಾರೆ ಎಂದು ತಿಳಿದು ಬಂದಿದೆ.
 
ಜಯಾ ಜನ್ಮದಿನ ಈ ಹೊಸ ಪಕ್ಷ ಅಸ್ತಿತ್ವಕ್ಕೆ ಬರದಿದ್ದು ಮುಖ್ಯಮಂತ್ರಿ ಪದವಿಗಾಗಿ ಹೆಣಗಾಡುತ್ತಿರುವ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರಿಗೆ ತಿರುಗೇಟು ನೀಡುವುದು ದೀಪಾ ಉದ್ದೇಶವಾಗಿದೆ.
 
ಉಸ್ತುವಾರಿ ಸಿಎಂ ಒ.ಪನ್ನೀರ್ ಸೆಲ್ವಂ ತಮಗೆ ದೀಪಾ ಬಗ್ಗೆ ಅಪಾರ ಗೌರವವಿದೆ. ಅವರು ತಮಗೆ ಬೆಂಬಲ ನೀಡುವ ವಿಶ್ವಾಸವಿದೆ ಎಂದು ಹೇಳಿಕೆ ನೀಡಿರುವುದು ಈ ಬೆಳವಣಿಗೆಯ ಮಹತ್ವವನ್ನು ಹೆಚ್ಚಿಸಿದೆ.
 
ಸೆಲ್ವಂ ಅವರನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸುತ್ತಾರೋ ಅಥವಾ ತಮ್ಮ ಬೆಂಬಲಿಗರೊಂದಿಗೆ ಪಕ್ಷದಲ್ಲಿ ವಿಲೀನಗೊಳ್ಳುವಂತೆ ಹೇಳುತ್ತಾರೋ ಎಂದು ಕಾದು ನೋಡಬೇಕಿದೆ. 

ವೆಬ್ದುನಿಯಾವನ್ನು ಓದಿ