ಕಳೆದ 7 ವರ್ಷಗಳ ಹಿಂದೆ ತೀವ್ರ ಸಂಚಲನವನ್ನು ಮೂಡಿಸಿದ್ದ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಐಟಿ ಉದ್ಯೋಗಿ ಜಿಗಿಶಾ ಘೋಷ್ ಅಪಹರಣ ಮತ್ತು ಹತ್ಯೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ ದೆಹಲಿ ನ್ಯಾಯಾಲಯ ಸೋಮವಾರ ಗಲ್ಲು ಶಿಕ್ಷೆ ವಿಧಿಸಿದೆ.
ನವದೆಹಲಿಯ ಹೆವಿಟ್ ಅಸೋಸಿಯೇಟ್ಸ್ ಪ್ರೈವೆಟ್ ಲಿಮಿಟೆಡ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ 2 ವರ್ಷದ ಜಿಗಿಶಾ ಘೋಷ್ 2009ರಲ್ಲಿ ಮಾರ್ಚ್ 18 ರಂದು ಕೆಲಸ ಮುಗಿಸಿಕೊಂಡು ಕ್ಯಾಬ್‌ನಲ್ಲಿ ದಕ್ಷಿಣ ದೆಹಲಿಯ ವಸಂತ ವಿಹಾರ್ ಪ್ರದೇಶದಲ್ಲಿ ಬಂದಿಳಿದ ಬಳಿಕ ನಾಪತ್ತೆಯಾಗಿದ್ದರು.
ಮಾರ್ಚ್ 20 ರಂದು ಅವರ ಮೃತದೇಹ ಹರ್ಯಾಣದ ಸೂರಜ್ ಕುಂಡ್ ಸಮೀಪ ಪತ್ತೆಯಾಗಿತ್ತು ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮೂವರನ್ನು ಬಂಧಿಸಿದ್ದರು.
ಮೂವರು ಅಪರಾಧಿಗಳಲ್ಲಿ ರವಿ ಕಪೂರ್ ಮತ್ತು ಅಮಿತ್ ಶುಕ್ಲಾ ಅವರಿಗೆ ಮರಣದಂಡನೆ ನೀಡಿದರೆ ಮತ್ತೊಬ್ಬ ಅಪರಾಧಿ ಬಲ್ಜೀತ್ ಮಲಿಕ್‌ಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .