ಆನೆಯೂ ಪ್ಯಾಂಟ್ ಹಾಕತ್ತೆ ಗೊತ್ತಾ?

ಭಾನುವಾರ, 5 ಫೆಬ್ರವರಿ 2017 (13:36 IST)
ಬೆಕ್ಕು, ನಾಯಿ, ಮಂಗಗಳಿಗೆ ಚಡ್ಡಿ ಅಂಗಿ ಹಾಕುವುದನ್ನು ನೋಟಿರುತ್ತೀರ. ಆದರೆ ದೈತ್ಯ ಜೀವಿ ಆನೆ ಬಟ್ಟೆ ತೊಟ್ಟಿಕೊಂಡಿರುವುದನ್ನು ಎಂದಾದರೂ ನೋಡಿರುತ್ತೀರಾ?
ಸರ್ಕಸ್‌ಗಳಲ್ಲಿ ನೀವಿದನ್ನು ಕಂಡಿರಲಿಕ್ಕೆ ಸಾಕು. ಆದರೆ ಮಥುರಾದಲ್ಲಿರುವ ವನ್ಯಜೀವಿ ಸಂರಕ್ಷಣಾಲಯದಲ್ಲಿ ಆನೆಗಳಿಗೂ ಪ್ಯಾಟ್, ಜಾಕೆಟ್ ತೊಡಿಸಲಾಗುತ್ತಿದೆ. ಆದರೆ ಇದು ಮೋಜಿಗಲ್ಲ. ಉತ್ತರ ಭಾರತವನ್ನು ಆವರಿಸಿರುವ ಭೀಕರ ಚಳಿಯ ಪರಿಣಾಮ ಇದು.
 
ಹೌದು ಸಹಿಸಲಾಗದ ಚಳಿಯಿಂದ ರಕ್ಷಿಸಲು ಇಲ್ಲಿ ಆನೆಗಳಿಗೆ ಪ್ಯಾಂಟ್, ಜಾಕೆಟ್ ,ರಾತ್ರಿ ಉಡುಪುಗಳನ್ನು ತೊಡಿಸಲಾಗುತ್ತಿದೆ. ಜತೆಗೆ ಹೊದಿಕೆಗಳನ್ನು ಹೊದಿಸಲಾಗುತ್ತಿದೆ. 
 
ಇವೆಲ್ಲವು ರಕ್ಷಿತ ಆನೆಗಳಾಗಿದ್ದು ಸಾಕಷ್ಟು ದೌರ್ಜನ್ಯ, ಹಿಂಸೆಗಳನ್ನು ಎದುರಿಸಿರುವ ಇವುಗಳು ದೈಹಿಕವಾಗಿ ನಿಶಕ್ತವಾಗಿದ್ದು, ಎದೆ ನಡುಗಿಸುವ ಚಳಿಯಿಂದ ರಕ್ಷಣೆ ತುರ್ತು ಅಗತ್ಯವಾಗಿದೆ ಎನ್ನುತ್ತಾರೆ ಈ ವನ್ಯಜೀವಿ ಸಂರಕ್ಷಣಾಲಯದ ಸಹ ಸಂಸ್ಥಾಪಕ ಮತ್ತು ಸಿಇಓ ಕಾರ್ತಿಕ್ ಸತ್ಯನಾರಾಯಣ.
 
ಕೆಲವು ಸ್ವಯಂ ಸೇವಾಸಂಸ್ಥೆಗಳ ಮುಂದಾಳತ್ವದಲ್ಲಿ  ಸಂರಕ್ಷಣಾಲಯದ ಸಮೀಪವಿರುವ ಹಳ್ಳಿಯೊಂದರ ಕೆಲ ಮಹಿಳೆಯರು ಈ ಬಟ್ಟೆಗಳನ್ನು ಹೊಲಿದುಕೊಟ್ಟಿದ್ದಾರೆ.
 
ಪೌಷ್ಟಿಕ ಆಹಾರ, ನಿಯಮಿತ ಸ್ನಾನ, ಚಿಕಿತ್ಸೆ ನೀಡುವ ಮೂಲಕ ಈ ಆನೆಗಳನ್ನು ಆರೋಗ್ಯಕಾರಿ ಮತ್ತು ಸಂತೋಷದಿಂದ ಬದುಕಲು ಅನುವು ಮಾಡಿಕೊಡುವುದು ನಮ್ಮ ಗುರಿ ಎನ್ನುತ್ತಾರೆ ಸತ್ಯನಾರಾಯಣ.
 

ವೆಬ್ದುನಿಯಾವನ್ನು ಓದಿ