ಬ್ರಿಜ್‌ಭೂಷಣ್‌ ಬಂಧನಕ್ಕೆ ಜೂನ್ 9 ಗಡುವು

ಶನಿವಾರ, 3 ಜೂನ್ 2023 (11:06 IST)
ಡಬ್ಲ್ಯೂಎಫ್ಐ ಮುಖ್ಯಸ್ಥನ ಸ್ಥಾನವನ್ನ ದುರುಪಯೋಗಪಡಿಸಿಕೊಂಡಿದ್ದಾರೆ. ಮೇ 9ರ ಒಳಗೆ ಬ್ರಿಜ್ ಭೂಷಣ್ನನ್ನ ಬಂಧಿಸಬೇಕು. ಜೊತೆಗೆ ಕುಸ್ತಿಪಟುಗಳ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನ ಹಿಂಪಡೆಯಬೇಕು.
 
ಇಲ್ಲದಿದ್ದರೇ ದೊಡ್ಡ ಮಟ್ಟದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ದೇಶಾದ್ಯಂತ ಪಂಚಾಯ್ತಿ ನಡೆಸುವ ಮೂಲಕ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಈ ನಡುವೆ ಕುಸ್ತಿಪಟುಗಳ ಮನವೊಲಿಸುವ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಪ್ರಯತ್ನವೂ ವಿಫಲವಾಗಿದೆ. ಅನುರಾಗ್ ಠಾಕೂರ್ ಕುಸ್ತಿಪಟುಗಳಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರೂ, ಅದಕ್ಕೆ ಒಪ್ಪದ ಕುಸ್ತಿಪಟುಗಳು ಭೂಷಣ್ ಬಂಧನವಾಗಲೇಬೇಕೆಂದು ಪಟ್ಟು ಹಿಡಿದಿದ್ದಾರೆ. 

ಅಲ್ಲದೇ ಪ್ರಮುಖ ಕ್ರೀಡಾಪಟುಗಳ ವಿರುದ್ಧ ಎಫ್ಐಆರ್ ಸಹ ದಾಖಲಿಸಲಾಗಿದೆ. ಇದರಿಂದ ಬೇಸತ್ತಿದ್ದ ಕುಸ್ತಿಪಟುಗಳು ತಾವು ಗೆದ್ದ ಪದಕಗಳನ್ನ ಗಂಗಾ ನದಿಗೆ ಎಸೆಯಲು ತೆರಳಿದ್ದರು. ಬಳಿಕ ರೈತಸಂಘದ ನಾಯಕರು ಮನವೊಲಿಸಿ ಕರೆತಂದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ