ಚೆನ್ನೈ: ತಮಿಳುನಾಡು ಬಿಜೆಪಿಗೆ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅಧ್ಯಕ್ಷರಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇತ್ತೀಚೆಗೆ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಣ್ಣಾಮಲೈ ಸೋಲು ಕಂಡಿದ್ದರು. ಆದರೆ ಕ್ಲೀನ್ ಚಿಟ್ ವ್ಯಕ್ತಿತ್ವ ಹೊಂದಿರುವ ಅಣ್ಣಾಮಲೈಗೆ ಯುವ ಜನರ ಬೆಂಬಲವಿದೆ.
ಹೀಗಾಗಿ ಅವರನ್ನೇ ಅಧ್ಯಕ್ಷರಾಗಿ ಮಾಡಿ ತಮಿಳುನಾಡಿನಲ್ಲಿ ಬಿಜೆಪಿ ವರ್ಚಸ್ಸು ಹೆಚ್ಚಿಸಿಕೊಳ್ಳುವ ಯೋಜನೆ ನಡೆದಿದೆ ಎನ್ನಲಾಗಿದೆ. ಅವರ ಜೊತೆಗೆ ಶಾಸಕ ಎನ್. ನಾಗೇಂದ್ರ ಹೆಸರೂ ಚಾಲ್ತಿಯಲ್ಲಿದೆ.