ನವದೆಹಲಿ: ಕೈಲಾಸ ಯಾತ್ರೆಗೆಂದು ಹೊರಟು ಹವಾಮಾನ ವೈಪರೀತ್ಯದಿಂದಾಗಿ ನೇಪಾಳದ ಸಿಮಿಕೋಟ್ ನಲ್ಲಿ ಸಿಲುಕಿಕೊಂಡಿದ್ದ ಕರ್ನಾಟಕದ ಸುಮಾರು 200 ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ರಕ್ಷಿಸಲಾಗಿದೆ.
ಭಾರೀ ಮಳೆ, ಹವಾಮಾನ ವೈಪರೀತ್ಯದಿಂದಾಗಿ ಕೈಲಾಸ ಯಾತ್ರೆ ಕೈಗೊಳ್ಳಲಾಗದೇ ದಾರಿ ಮಧ್ಯೆ ಸಂಕಷ್ಟಕ್ಕೆ ಸಿಲುಕಿದ್ದ ಯಾತ್ರಾರ್ಥಿಗಳು ಕಳೆದ ನಾಲ್ಕು ದಿನಗಳಿಂದಲೂ ಅನ್ನ, ಆಹಾರವಿಲ್ಲದೇ ಪರದಾಡುತ್ತಿದ್ದರು.
ಇದೀಗ ಕರ್ನಾಟಕ ಭವನದ ಅಧಿಕಾರಿಗಳು, ದೆಹಲಿ ರಾಯಭಾರ ಕಚೇರಿ ಸತತ ಪರಿಶ್ರಮದಿಂದಾಗಿ ಕರ್ನಾಟಕ ಸೇರಿದಂತೆ ಭಾರತದಿಂದ ತೆರಳಿದ್ದ ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ಯಲಾಗಿದೆ. ಇದೀಗ ಯಾತ್ರಾರ್ಥಿಗಳನ್ನು ,ರಸ್ತೆ, ರೈಲು ಯಾನದ ಮೂಲಕ ದೆಹಲಿಗೆ ಕರೆತರಲಾಗುತ್ತಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.