ಕಣ್ಣೂರು: ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಿ 8 ವಿದ್ಯಾರ್ಥಿಗಳು ಅಸ್ವಸ್ಥ

Sampriya

ಶನಿವಾರ, 29 ಜೂನ್ 2024 (18:07 IST)
ಕೇರಳ: ಕಣ್ಣೂರಿನ ರಾಮಪುರಂನಲ್ಲಿ ಟ್ಯಾಂಕರ್ ಲಾರಿಯಿಂದ ಗ್ಯಾಸ್ ಸೋರಿಕೆಯಾಗಿ ನರ್ಸಿಂಗ್ ಕಾಲೇಜಿನ ಕನಿಷ್ಠ 8 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ನಡೆದಿದೆ.  

ಈ ಜಿಲ್ಲೆಯ ರಾಮಪುರಂನಲ್ಲಿ ಟ್ಯಾಂಕರ್ ಲಾರಿಯಿಂದ ಅನಿಲ ಸೋರಿಕೆಯಾದ ನಂತರ ನರ್ಸಿಂಗ್ ಕಾಲೇಜಿನ ಕನಿಷ್ಠ ಎಂಟು ವಿದ್ಯಾರ್ಥಿಗಳು ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಮತ್ತು ಪಜಯಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಟ್ಯಾಂಕರ್ ಲಾರಿ ನೆರೆಯ ಕರ್ನಾಟಕದಿಂದ ಎರ್ನಾಕುಲಂಗೆ ತೆರಳುತ್ತಿದ್ದಾಗ ಹೈಡ್ರೋಕ್ಲೋರಿಕ್ ಆಸಿಡ್ ಸೋರಿಕೆಯಾಗಿದೆ.

ಪಯ್ಯನ್ನೂರಿನಿಂದ ಅಗ್ನಿಶಾಮಕ ದಳದ ತಂಡ ಮತ್ತು ಪರಿಯಾಯಂ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮಗಳನ್ನು ಪ್ರಾರಂಭಿಸಿದರೂ, ಸೋರಿಕೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂಟೈನರ್‌ನ ಹಿಂಬದಿಯ ವಾಲ್ವ್‌ನಲ್ಲಿ ಸೋರಿಕೆ ಕಂಡುಬಂದಿದ್ದು, ಅಗ್ನಿಶಾಮಕ ದಳದಿಂದ ವಾಹನವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ