ಆಮ್ ಆದ್ಮಿ ಪಕ್ಷದ ವಿರುದ್ಧ ಕಪಿಲ್ ಮಿಶ್ರಾ ಇನ್ನೊಂದು ಬಾಂಬ್

ಭಾನುವಾರ, 21 ಮೇ 2017 (13:34 IST)
ದೆಹಲಿ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ತಿರುಗಿ ಬಿದ್ದಿರುವ ಆಪ್ ಮಾಜಿ ಸಚಿವ ಕಪಿಲ್ ಮಿಶ್ರಾ ಹೊಸ ಬಾಂಬ್ ಸಿಡಿಸಿದ್ದಾರೆ.
 
ಆಮ್ ಆದ್ಮಿ ಪಕ್ಷದ ನಾಯಕರಾದ ಆಶುತೋಷ್ ಹಾಗೂ ಸಂಜಯ್ ಸಿಂಗ್ ಅವರ ರಷ್ಯಾ ಪ್ರವಾಸಕ್ಕೆ ಹಲವು ಕಂಪನಿಗಳ ಹಗರಣದ ಆರೋಪಿ ಶೀತಲ್ ಪ್ರಸಾದ್ ಸಿಂಗ್ ಅವರು ಹಣಕಾಸಿನ ನೆರವು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
 
ಪಕ್ಷದಲ್ಲಿ 4ರಿಂದ 5ಮಂದಿ ಭ್ರಷ್ಟರಿದ್ದು, ಅವರನ್ನು ಪಕ್ಷದಿಂದ ಹೊರ ಹಾಕುವ ಅಗತ್ಯವಿದೆ.ಅಲ್ಲದೆ ಆಶುತೋಷ್ ಮತ್ತು ಸಂಜಯ್ ಸಿಂಗ್ ಆಪ್ ಪಕ್ಷವನ್ನು ಹೈಜಾಕ್ ಮಾಡಿದ್ದಾರೆ ಎಂದು ಗುಡುಗಿದ್ದಾರೆ. ಭ್ರಷ್ಟಾಚಾರ ಮುಕ್ತ ದೆಹಲಿಗಾಗಿ 'ಕ್ಲೀನ್ ಎಎಪಿ' ಆಂದೋಲನಕ್ಕೆ ಕೈ ಜೋಡಿಸುವಂತೆಯೂ ಇದೇ ವೇಳೆ ಮಿಶ್ರಾ ಕರೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ