ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರ: ತಮಿಳುನಾಡಿನಾದ್ಯಂತ ಕಟ್ಟೆಚ್ಚರ

ಮಂಗಳವಾರ, 7 ಆಗಸ್ಟ್ 2018 (16:17 IST)
ಚೆನ್ನೈ: ಡಿಎಂಕೆ ಮುಖ್ಯಸ್ಥ, ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ತಮಿಳುನಾಡಿನಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.
 

ಡಿಎಂಕೆ ಮುಖ್ಯಸ್ಥನ ಆರೋಗ್ಯ ಸ್ಥಿತಿ ನಿನ್ನೆ ರಾತ್ರಿಯಿಂದ ತೀವ್ರ ಉಲ್ಬಣಗೊಂಡಿದ್ದು, ಪುತ್ರ ಎಂಕೆ ಸ್ಟಾಲಿನ್, ಪುತ್ರಿ ಕನಿಮೊಳಿ ಸೇರಿದಂತೆ ಕುಟುಂಬ ವರ್ಗವೇ ಅಲ್ಲಿ ನೆರೆದಿದೆ. ಜತೆಗೆ ಆಸ್ಪತ್ರೆಯ ಸುತ್ತಮುತ್ತ ಸಾವಿರಾರು ಮಂದಿ ಅಭಿಮಾನಿಗಳೂ ಸೇರಿದ್ದಾರೆ.

ಇಂದು ಮಧ್ಯಾಹ್ನ ಸ್ಟಾಲಿನ್ ಮತ್ತು ಕುಟುಂಬ ವರ್ಗ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿಯವರನ್ನು ಭೇಟಿಯಾಗಿದ್ದು, ತಮ್ಮ ತಂದೆಯ ಆರೋಗ್ಯ ಸ್ಥಿತಿ ಗತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಆಸ್ಪತ್ರೆಯ ಮೂಲಗಳು ಬಿಡುಗಡೆ ಮಾಡಲಿರುವ ಮಾಧ್ಯಮ ಹೇಳಿಕೆಯಿಂದ ತಿಳಿದುಬರಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ