ದೇಶಗಳ ಪಾಲುದಾರಿಕೆಗೆ ಉತ್ಸುಕನಾಗಿದ್ದೇನೆ : ನರೇಂದ್ರ ಮೋದಿ
ಶುಕ್ರವಾರ, 28 ಅಕ್ಟೋಬರ್ 2022 (06:31 IST)
ನವದೆಹಲಿ : ನೂತನ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ಭಾರತ ಮೂಲದ ರಿಷಿ ಸುನಾಕ್ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಶುಭ ಕೋರಿದ್ದಾರೆ.
ಇದಕ್ಕೆ ರಿಷಿ ಸುನಾಕ್ ಧನ್ಯವಾದ ಅರ್ಪಿಸಿದ್ದಾರೆ. ಮುಂಬರುವ ದಿನಗಳಲ್ಲಿ ಎರಡೂ ರಾಷ್ಟ್ರಗಳು ಒಟ್ಟಾಗಿ ಯಾವ ಹೊಸ ಹೆಜ್ಜೆಗಳನ್ನು ಇಡಬಹುದು ಎಂಬ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ಸುನಾಕ್ ಟ್ವೀಟ್ನಲ್ಲಿ ಹೇಳಿದ್ದಾರೆ.